Headline
C V V and K V N K have done many things to see our Chickballapura developed in every possible way. Now It's our turn to unite and do something in return
ನಾನು ಚಿಕ್ಕಬಳ್ಳಾಪುರ ಕ್ಷೇತ್ರದ ಜನತೆ ಬೆಳೆಸಿದ ಮಗ ಹೊರಗಿನಿಂದ ಬಂದವನಲ್ಲ – ಕೆ. ವಿ. ನವೀನ್ ಕಿರಣ್ 

ಚಿಕ್ಕಬಳ್ಳಾಪುರ /ನುಗತಹಳ್ಳಿ:  ಯಾರು ಹೊರಗಿನವರು, ಯಾರು ಅಲ್ಲ ಎಂಬುದನ್ನು ಜನತೆಗೆ ಗೊತ್ತಿರುವ ವಿಚಾರ. ನಾನು ಇದೇ ಮಣ್ಣಿನಲ್ಲಿ ಹುಟ್ಟಿ ಬೆಳೆದದ್ದು. ಚಿಕ್ಕಬಳ್ಳಾಪುರ ಕ್ಷೇತ್ರದ ಜನತೆ ಬೆಳೆಸಿದ ಮಗ, ಹೊರಗಿನಿಂದ ಬಂದವನಲ್ಲ ಎಂದು ಸಮಾಜ ಸೇವಕ ಕೆ. ವಿ. ನವೀನ್ ಕಿರಣ್ ಹೇಳಿದರು. ನುಗತಹಳ್ಳಿ ಗ್ರಾಮದಲ್ಲಿ ನಡೆದ ಬೇರೆ ಬೇರೆ ಪಕ್ಷದ ಕಾರ್ಯಕರ್ತರೆಲ್ಲ ನವೀನ್ ಕಿರಣ್ ಬಣಕ್ಕೆ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಮುಖಂಡ ನುಗತಹಳ್ಳಿ ರವಿ ಅವರ ನೇತೃತ್ವದಲ್ಲಿ ನಲಮಕಾನ ಹಳ್ಳಿ ಮತ್ತು ಕೇಶವಾರದ ಸುಮಾರು 40 ಕ್ಕೂ ಹೆಚ್ಚು ಕಾರ್ಯಕರ್ತರು ಇಂದು ನವೀನ್ ಕಿರಣ್ ಬಣವನ್ನು ಸೇರಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಕೆ. ವಿ. ನವೀನ್ ಕಿರಣ್.ಇಂದು ಅನೇಕರು ನನ್ನನ್ನು ಜಾತಿವಾದಿ ಎಂದು ಬಿಂಬಿಸಲು  ಯತ್ನಿಸುತ್ತಿದ್ದಾರೆ. ಆದರೆ ನಾನು ಜಾತಿ, ಧರ್ಮ ಎಲ್ಲವನ್ನೂ…

Read More

ಬದಲಾವಣೆಯ ಹೋರಾಟಕ್ಕೆ ಹೊನ್ನೇನಹಳ್ಳಿ ಜನರು ಜೊತೆಯಾಗ ಬೇಕು – ಕೆ. ವಿ. ನವೀನ್ ಕಿರಣ್

ಚಿಕ್ಕಬಳ್ಳಾಪುರ/ ಹೊನ್ನೇನಹಳ್ಳಿ :  ಭ್ರಷ್ಟಾಚಾರದ ವಿರುದ್ಧದ ಹೋರಾಟಕ್ಕೆ ಇವತ್ತು ಕ್ಷೇತ್ರ ಪೂರ್ತಿ ಬೆಂಬಲ ಸಿಕ್ಕಿದೆ. ಈ ಬದಲಾವಣೆಯ ಹೋರಾಟಕ್ಕೆ ಹೊನ್ನೇನಹಳ್ಳಿ ಜನತೆಯೂ ಸಹ ಜೊತೆಯಾಗ ಬೇಕು ಎಂದು ಸಮಾಜ ಸೇವಕ ಕೆ.ವಿ. ನವೀನ್ ಕಿರಣ್ ಕರೆ ನೀಡಿದರು. ಹೊನ್ನೇನಹಳ್ಳಿ ಗ್ರಾಮದಲ್ಲಿ ತಮ್ಮ ಚುನಾವಣಾ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದ ಅವರು ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಭ್ರಷ್ಟಾಚಾರ ಅನ್ನೋದು ಎಲ್ಲೆಡೆ ಬೇರೂರಿದೆ. ಅದನ್ನು ನಾವು ಬೇರು ಸಮೇತ ಕಿತ್ತು ಹಾಕಬೇಕಿದೆ. ಅದಕ್ಕೆ ಪ್ರತಿಯೊಬ್ಬ ವ್ಯಕ್ತಿಯೂ ಸಹ ಬದಲಾವಣೆಯಲ್ಲಿ ಭಾಗಿಯಾಗಬೇಕು ಎಂದರು.  ಎಲ್ಲೆಡೆ ಚಿಕ್ಕಬಳ್ಳಾಪುರವನ್ನು ಸಂಪೂರ್ಣ ಅಭಿವೃದ್ದಿ ಮಾಡಿದ್ದೇನೆ ಎಂದು ಹೇಳಿಕೊಂಡು ತಿರುಗುತ್ತಾರೆ ಇವರ ಅಭಿವೃದ್ದಿ ಕಾರ್ಯ ಎಷ್ಟು ಅನ್ನೋದನ್ನು ಪ್ರತಿಷ್ಠಿತ ಪತ್ರಿಕೆಗಳಲ್ಲಿನ ವರದಿಗಳನ್ನು ಒಮ್ಮೆ ನೋಡಿ ಅವರ ಕಾರ್ಯವೈಖರಿ ತಿಳಿಯುತ್ತೆ ಕ್ಷೇತ್ರದ ಅಭಿವೃದ್ದಿ ಬದಲಿಗೆ…

Read More

ಹಣ ಬಲದಿಂದ ಗೆಲ್ಲಬಹುದು ಅನ್ನೋದು ಕೇವಲ ಭ್ರಮೆ, ಹಣ ಬಲಕ್ಕಿಂತ ಜನ ಬಲ ಮುಖ್ಯ – ಕೆ. ವಿ. ನವೀನ್ ಕಿರಣ್

ಚಿಕ್ಕಬಳ್ಳಾಪುರ / ನಿಮ್ಮಾಕಲನಕುಂಟೆ : ಹಣ ಬಲದಿಂದ ಏನನ್ನಾದರೂ ಗೆಲ್ಲಬಹುದು ಅನ್ನುವ ಭ್ರಮೆಯಲ್ಲಿ ಕೆಲವರು ಇದ್ದರೆ, ಅದರೆ ಅದು ಎಂದಿಗೂ ಸಾಧ್ಯವಿಲ್ಲ. ಹಣ ಬಲಕ್ಕಿಂತ, ಜನ ಬಲ ಮುಖ್ಯ ಎಂದು ಸಮಾಜ ಸೇವಕ ಕೆ.ವಿ. ನವೀನ್ ಕಿರಣ್ ಹೇಳಿದರು. ನಗರದ 7 ನೇ ವಾರ್ಡ್ ನಿಮ್ಮಾಕಲನಕುಂಟೆ ನಲ್ಲಿ ನಡೆದ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ದುಡ್ಡಿನಿಂದ ಎಲ್ಲರನ್ನೂ ಖರೀದಿ ಮಾಡುವ ಹುಚ್ಚು ಸಾಹಸಕ್ಕೆ ಕೈ ಹಾಕಿದ್ದಾರೆ. ಇಂದು ಜನರು ಜಾಗೃತರಾಗಿದ್ದಾರೆ, ಖಂಡಿತ ಈ ಬಾರಿ ಬದಲಾವಣೆಗೆ ಜನರು ಮನ್ನಣೆ ನೀಡುತ್ತಾರೆ ಎಂದರು.  ಮೊದಲು ತೆರೆದ ವಾಹನದಲ್ಲಿ ಮೆರವಣಿಗೆ  ಮೂಲಕ ತಮ್ಮ ನಾಯಕನಿಗೆ ಅದ್ದೂರಿ ಸ್ವಾಗತ ಕೋರಿದ ಜನರು ತಮ್ಮ ಸಂಪೂರ್ಣ ಬೆಂಬಲ ನೀಡುವುದಾಗಿ ಘೋಷಿಸಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಅನೇಕ ಮುಖಂಡರು…

Read More

ಗೆದ್ದು ಬಂದ ಮೂರು ತಿಂಗಳ ಅವಧಿಯಲ್ಲಿ ಗ್ರಾಮಗಳಿಗೆ ಸಂಪೂರ್ಣ ಮೂಲಸೌಕರ್ಯ ವ್ಯವಸ್ಥೆ – ಕೆ. ವಿ. ನವೀನ್ ಕಿರಣ್ 

  ಕೇತೇನಹಳ್ಳಿ :  ಕ್ಷೇತ್ರದಲ್ಲಿನ ಗ್ರಾಮಗಳ ಅಭಿವೃದ್ಧಿಯೇ ನನ್ನ ಗುರಿ, ಗೆದ್ದು ಬಂದ ಮೂರು ತಿಂಗಳ ಒಳಗೆ ಎಲ್ಲ ಗ್ರಾಮಗಳಿಗೂ ಮೂಲ ಸೌಕರ್ಯ ಒದಗಿಸುತ್ತೇನೆ ಎಂದು ಸಮಾಜ ಸೇವಕ ಕೆ.ವಿ. ನವೀನ್ ಕಿರಣ್ ತಿಳಿಸಿದರು. ಕೇತೇನಹಳ್ಳಿಯಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡಿದ ಅವರು ಪ್ರತಿ ಹಳ್ಳಿಗೂ ಮೂಲ ಸೌಕರ್ಯ ಸಿಗಬೇಕು. ನನ್ನ ಮೊದಲ ಆಧ್ಯತೆ  ಗ್ರಾಮಗಳ ಸಂಪೂರ್ಣ ಅಭಿವೃದ್ದಿ ಮಾಡುವುದು ಎಂದು ಹೇಳಿದರು. ಗ್ರಾಮಸ್ಥರ ಕುಂದು ಕೊರತೆ ಆಲಿಸಿದ ಅವರು ಚುನಾವಣೆಯ ನಂತರ ಎಲ್ಲ ರೀತಿಯ ಅಭಿವೃದ್ಧಿ ಕಾರ್ಯ ಮಾಡುವುದಾಗಿ ತಿಳಿಸಿದರು. ನಂತರ ಮಾತನಾಡಿದ ಗ್ರಾಮದ ಮುಖಂಡರು ನಮ್ಮ ಗ್ರಾಮಕ್ಕೆ ನೀರು, ಆಸ್ಪತ್ರೆ ಅವಶ್ಯಕತೆ ಇದೆ ಅದನ್ನು ಒದಗಿಸಿ ಕೊಡಿ ಎಂದರು. ಈ ಬಾರಿ ನಾವೂ ಸಹ…

Read More

ಚುನಾವಣೆಯಲ್ಲಿ ಕೆ.ವಿ. ನವೀನ್ ಕಿರಣ್ ಅವರ ಬೆಂಬಲಕ್ಕೆ ಸಮಾಜವಾದಿ ಪಕ್ಷ ಬೆಂಬಲಿಸುತ್ತದೆ – ರಾಜ್ಯಾಧ್ಯಕ್ಷ ರಾಬಿನ್ ಮ್ಯಾಥುಸ್ ಘೋಷಣೆ.

ಚಿಕ್ಕಬಳ್ಳಾಪುರ : ಆದರ್ಶ ವ್ಯಕ್ತಿತ್ವವುಳ್ಳ ಜನನಾಯಕರು ಇವತ್ತು ಬೇಕಾಗಿದ್ದಾರೆ, ಅಂಥವರಲ್ಲಿ ಚಿಕ್ಕಬಳ್ಳಾಪುರದ ಕೆ.ವಿ. ನವೀನ್ ಕಿರಣ್ ಕೂಡಾ ಒಬ್ಬರು ಎಂದು ಸಮಾಜವಾದಿ ಪಕ್ಷದ  ರಾಜ್ಯಾಧ್ಯಕ್ಷರಾದ ರಾಬಿನ್ ಮ್ಯಾಥುಸ್ ಹೇಳಿದರು. ಸಿ.ವಿ.ವಿ ಕ್ಯಾಂಪಸ್ ನಲ್ಲಿ ಸಮಾಜ ಸೇವಕ ಕೆ.ವಿ. ನವೀನ್ ಕಿರಣ್ ಅವರನ್ನು ಭೇಟಿ ಮಾಡಿ ಮಾತನಾಡಿದ ಅವರು ನವೀನ್ ಕಿರಣ್ ಅವರು ಮಾಡಿರುವ ಸಾಮಾಜಿಕ ಹಾಗೂ ಜನಪರ ಕಾರ್ಯಕ್ರಮಗಳು  ನಿಜಕ್ಕೂ ಶ್ಲಾಘನೀಯ. ಇಂಥಹ ಸರಳ ವ್ಯಕ್ತಿತ್ವದ ನಾಯಕರು ರಾಜಕೀಯಕ್ಕೆ ಬರಬೇಕು. ಇವರ ಸಮಾಜಿಕ ಕಾಳಜಿ, ಬದ್ಧತೆ ಮೆಚ್ಚುವಂತದ್ದು. ನವೀನ್ ಕಿರಣ್ ಅವರ ಕಾರ್ಯಗಳನ್ನು ಮೆಚ್ಚಿ ಈ ಬಾರಿಯ ಚುನಾವಣೆಯಲ್ಲಿ ಅವರನ್ನು ಸಂಪೂರ್ಣವಾಗಿ ನಾವೂ ಹಾಗೂ ನಮ್ಮ ಪಕ್ಷದ ವತಿಯಿಂದ ಅವರನ್ನು ಬೆಂಬಲಿಸುತ್ತೇವೆ ಎಂದು ಹೇಳಿದರು.    

Read More

ಚಿಕ್ಕಬಳ್ಳಾಪುರ ಕ್ಷೇತ್ರವನ್ನು ಉಳಿಸಿಕೊಳ್ಳಬೇಕಾದರೆ ಟಿಕೇಟ್ ವಿಚಾರದಲ್ಲಿ ಕಾಂಗ್ರೆಸ್ ಹೈಕಮಾಂಡ್ ಜನಾಭಿಪ್ರಾಯ ಸಂಗ್ರಹಿಸಿ ಸರಿಯಾದ ನಿರ್ಧಾರ ಕೈಗೊಳ್ಳಬೇಕು – ಕೆ.ವಿ. ನವೀನ್ ಕಿರಣ್ ಮನವಿ

ಚಿಕ್ಕಬಳ್ಳಾಪುರ/ಪೆರೆಸಂದ್ರ : ಚಿಕ್ಕಬಳ್ಳಾಪುರ ಕ್ಷೇತ್ರವನ್ನು ಕಾಂಗ್ರಸ್ ಪಕ್ಷ ಉಳಿಸಿಕೊಳ್ಳಬೇಕಾದರೆ ಟಿಕೆಟ್ ವಿಚಾರದಲ್ಲಿ ಜನಾಭಿಪ್ರಾಯ ಸಂಗ್ರಹಿಸಿ ಸರಿಯಾದ ನಿರ್ಧಾರ ಕೈಗೊಳ್ಳಬೇಕು ಎಂದು ಕಾಂಗ್ರಸ್ ಮುಖಂಡ ಹಾಗೂ ಟಿಕೆಟ್‍ನ ಪ್ರಭಲ ಆಕಾಂಕ್ಷಿಯಾಗಿರುವ ಕೆ.ವಿ. ನವೀನ್ ಕಿರಣ್ ಹೇಳಿದರು.   ಶಾಸಕ ಡಾ. ಕೆ. ಸುಧಾಕರ್ ಅವರ ಸ್ವಕ್ಷೇತ್ರ ಪೆರೆಸಂದ್ರದಲ್ಲಿ ತಮ್ಮ ಮೊದಲ ರಾಜಕೀಯ ಬೃಹತ್ ಸಮಾವೇಶ ಮಾಡುವ ಮೂಲಕ ಚುನಾವಣಾ ರಣಕಹಳೆ ಮೊಳಗಿಸಿದ ನವೀನ್ ಕಿರಣ್ ಚಿಕ್ಕಬಳ್ಳಾಪುರದ ರಜಕೀಯ ಇತಿಹಾಸದಲ್ಲಿ ಹೊಸ ಸಂಚಲನ ಉಂಟು ಮಾಡಿರುವ ಅವರು ತಮ್ಮ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.  ನಮ್ಮ ಶಾಸಕರು ಕ್ಷೇತ್ರದ ಅಭಿವೃದ್ಧಿಗಿಂತ ತಮ್ಮ ಅಭಿವೃದ್ಧಿಗೆ ಹೆಚ್ಚು ಆಸಕ್ತಿ ನೀಡಿದ್ದಾರೆ. ಅಧೀಕಾರದ ದುರಹಂಕಾರದಲ್ಲಿ ಈ ಭಾಗದ ಜನರಿಗೆ ಕೊಡಬಾರದಷ್ಟು ಕಿರುಕುಳ ನೀಡಿದ್ದಾರೆ. ಕ್ಷೇತ್ರದಲ್ಲಿ ಸರಿಯಾದ ರೀತಿಯಲ್ಲಿ ಒಂದೇ ಒಂದು…

Read More

ಜನಸ್ನೇಹಿ ಆಡಳಿತಕ್ಕಾಗಿ ನನ್ನನ್ನು ಬೆಂಬಲಿಸಿ – ಬನ್ನಿಕುಪ್ಪೆಯಲ್ಲಿ ಕೆ.ವಿ. ನವೀನ್ ಕಿರಣ್

ಚಿಕ್ಕಬಳ್ಳಾಪುರ/ಬನ್ನಿಕುಪ್ಪೆ : ಚಿಕ್ಕಬಳ್ಳಾಪುರದ ಜನತೆ ಭ್ರಷ್ಟಾಚಾರ ಮತ್ತು ದಬ್ಬಾಳಿಕೆಯಿಂದ ರೋಸಿ ಹೋಗಿದ್ದು, ಜನಸ್ನೇಹಿ ಮತ್ತು ಭ್ರಷ್ಟಾಚಾರ ರಹಿತ ಆಡಳಿತಕ್ಕಾಗಿ ಈ ಬಾರಿಯ ಚುನಾವಣೆಯಲ್ಲಿ ನನ್ನನು ಬೆಂಬಲಿಸಿ ಎಂದು ಸಮಾಜ ಸೇವಕ ಕೆ.ವಿ. ನವೀನ್ ಕಿರಣ್ ಹೇಳಿದರು. ಬನ್ನಿಕುಪ್ಪೆ ಗ್ರಾಮದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು ಚಿಕ್ಕಬಳ್ಳಾಪುರದಲ್ಲಿ ಸರ್ವಾಧಿಕಾರದ ಆಡಳಿತ ಹೆಚ್ಚಾಗಿದ್ದು, ಜನರು ಆದರ ವಿರುದ್ಧ ಧ್ವನಿ ಎತ್ತುವ ಸಮಯ ಈಗ ಬಂದಿದೆ. ಎಲ್ಲರೂ ಒಗ್ಗಟ್ಟಾಗಿ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಬೇಕಿದೆ ಎಂದರು. ನಂತರ ಮಾತನಾಡಿದ ಕೆ.ವಿ. ನವೀನ್ ಕಿರಣ್ ಅವರ ತಾಯಿ ಹಾಗೂ ನಗರಸಭಾ ಸದಸ್ಯೆರಾದ ಶ್ರೀಮತಿ ನಿರ್ಮಲಾ ಸಾಯಿಪ್ರಭು ಈ ಭಾಗದ  ಜನರಿಗೆ ದಿವಂಗತ ಸಿ.ವಿ. ವೇಂಕಟರಾಯಪ್ಪ ನವರ ಕೊಡುಗೆ ಅಪಾರ. ಅವರ ಮೊಮ್ಮಗ ನನ್ನ ಮಗ…

Read More

ಮಹಿಳೆಯರು ಮನಸ್ಸು ಮಾಡಿದ್ದೇ ಆದಲ್ಲಿ ಎಂಥ ಬದಲಾವಣೆ ಬೇಕಾದರೂ ಮಾಡಬಹುದು – ಕೆ.ವಿ. ನವೀನ್ ಕಿರಣ್ 

ಚಿಕ್ಕಬಳ್ಳಾಪುರ/ ಸಿ.ವಿ.ವಿ. ಕ್ಯಾಂಪಸ್ : ಸ್ತ್ರೀ ಯನ್ನು ಆದಿ ಶಕ್ತಿ ಎಂದು ಕರೆಯುತ್ತಾರೆ, ಅವರು ಮನಸ್ಸು ಮಾಡಿದರೆ ಜಗತ್ತಿನಲ್ಲಿ ಏನು ಬೇಕಾದರೂ ಬದಲಾವಣೆ ಮಾಡಬಹುದು ಅಂತಹ ಶಕ್ತಿ ಅವರಲ್ಲಿದೆ ಎಂದು ಸಮಾಜ ಸೇವಕ ಕೆ.ವಿ.ನವೀನ್ ಕಿರಣ್ ತಿಳಿಸಿದರು. ಸಿ.ವಿ.ವಿ. ಕ್ಯಾಂಪಸ್ ನಲ್ಲಿ ನಗರದ ಮಹಿಳೆಯರೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಪ್ರತಿ ಬದಲಾವಣೆಯಲ್ಲಿ ಸ್ತ್ರೀಯರ ಪಾತ್ರ ಬಹು ಮುಖ್ಯ. ಮಹಿಳೆಯರು ಮನಸ್ಸು ಮಾಡಿದರೆ ಇಡೀ ಕ್ಷೇತ್ರದ ಚಿತ್ರಣವನ್ನೇ ಬದಲಿಸಬಹುದು ಎಂದರು. ಈ ಬಾರಿಯ ಚುನಾವಣೆಯಲ್ಲಿ ಮಹಿಳೆಯರು ಯಾವುದೇ ಆಮಿಷಗಳಿಗೆ ಮಾರು ಹೋಗದೆ ಮತದಾನ ಮಾಡಬೇಕು. ಇದು ಒಂದು ಬಾರಿ ನನ್ನನ್ನು ಬೆಂಬಲಿಸಿ ಎಂದು ಮನವಿ ಮಾಡಿದರು. ನಂತರ ಮಾತನಾಡಿದ ಮಹಿಳೆಯರು  ನಮಗೆ ಸೀರೆ ಕೊಡಿಸುವ ನಾಯಕ ಬೇಡ, ಜನರ ಸೇವೆ…

Read More

ಕೆ ವಿ ನವೀನ್ ಕಿರಣ್ ಅಭಿಮಾನಿ ಹಾಗು ಕಾರ್ಯಕರ್ತರ ಬೃಹತ್ ಸಮಾವೇಶ!

ಸ್ಥಳ: ಮಂಜುನಾಥ ಕಲ್ಯಾಣ ಮಂಟಪದ ಎದುರು ಮೈದಾನ, ಪೆರೇಸಂದ್ರ ದಿನಾಂಕ : 11 / 03 /2018 ಭಾನುವಾರ ಸಹಸ್ರ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಯಶಸ್ವಿಗೋಳಿಸಬೇಕಾಗಿ ವಿನಂತಿ . ಇಂತಿ ನಿಮ್ಮ ಮನೆಯ ಮಗ ಕೆ ವಿ ನವೀನ್ ಕಿರಣ್ Download KVNK App:  https://play.google.com/store/apps/details?id=mobi.androapp.ourleaderkvnk.c3184

Read More

ಗ್ರಾಮೀಣ ಭಾಗದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ಶಿಕ್ಷಣ ಸಂಸ್ಥೆಗಳು ಹೆಚ್ಚಾಗಿ ಬೆಳೆಯಬೇಕು – ಕೆ.ವಿ. ನವೀನ್ ಕಿರಣ್

    ಚಿಕ್ಕಬಳ್ಳಾಪುರ/ ಕೊಳವನಹಳ್ಳಿ : ಗ್ರಾಮೀಣ ಪ್ರದೇಶಗಳಲ್ಲಿನ ಮಕ್ಕಳಿಗೂ ಸಹ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯ ಬೇಕು.  ಕಲ್ಪವೃಕ್ಷ ಶಿಕ್ಷಣ ಸಂಸ್ಥೆಯಂಥ ಅನೇಕ ಸಂಸ್ಥೆಗಳು ಇಂದು ಗ್ರಾಮೀಣ ಪ್ರದೇಶಗಳಲ್ಲಿ ಬೆಳೆಯ ಬೇಕು ಎಂದು ಸಮಾಜ ಸೇವಕ ಕೆ.ವಿ. ನವೀನ್ ಕಿರಣ್ ಅವರು ಹೇಳಿದರು. ಕೊಳವನಹಳ್ಳಿಯ ಕಲ್ಪವೃಕ್ಷ ಗ್ರಾಮಾಂತರ ಪ್ರೌಢಶಾಲೆಯ 23 ನೇ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶಗಳಲ್ಲಿ  ಕಟ್ಟಿ ಉತ್ತಮ ಗುಣಮಟ್ಟದ ಶಿಕ್ಷಣ ಸಿಗುವಂತಾಗಬೇಕು. ಕಲ್ಪವೃಕ್ಷ ಶಿಕ್ಷಣ ಸಂಸ್ಥೆ ಆ ಕೆಲಸವನ್ನು 23 ವರ್ಷಗಳಿಂದ ಮಾಡುತ್ತಾ ಬಂದಿದ್ದಾರೆ. ನಿಜಕ್ಕೂ ಇದು ಶ್ಲಾಘನೀಯ ಎಂದು ಹೇಳಿದರು. ಪ್ರತಿ ಹಳ್ಳಿಯಲ್ಲೂ ಇಂತಹ ಶಿಕ್ಷಣ ಸಂಸ್ಥೆಗಳು ಬೆಳೆಯಬೇಕು ಆಗಲೇ ಗ್ರಾಮೀಣ ಭಾಗದ ಪ್ರತಿಯೊಂದು ಮಗುವಿಗೂ ಒಳ್ಳೆಯ ಶಿಕ್ಷಣ ದೊರೆಯುತ್ತದೆ…

Read More

https://play.google.com/store/apps/details?id=mobi.androapp.ourleaderkvnk.c3184