Headline
C V V and K V N K have done many things to see our Chickballapura developed in every possible way. Now It's our turn to unite and do something in return
ಭ್ರಷ್ಟಾಚಾರ ಮುಕ್ತ, ಜನಸ್ನೇಹಿ ಆಡಳಿತವೇ ರಾಮರಾಜ್ಯ – ಕೆ. ವಿ. ನವೀನ್ ಕಿರಣ್

ಎಲ್ಲ ನನ್ನ ಅತ್ಮೀಯರಿಗೂ, ಮರ್ಯಾದಾ ಪುರುಷೋತ್ತಮ ರಾಮರಾಜ್ಯ ಸಾಮ್ರಾಟ  ಶ್ರೀರಾಮನ ಜನ್ಮ ದಿನ, ಶ್ರೀರಾಮ ನವಮಿ ಹಬ್ಬದ ಶುಭಾಶಯಗಳು. ಆತ್ಮೀಯರೆ, ಇಡೀ ಜಗತ್ತಿಗೆ ಮಾದರಿ, ಹಾಗೂ ಭ್ರಷ್ಟಾಚಾರ ಮುಕ್ತ ಜನಸ್ನೇಹಿ ಆಡಳಿತವನ್ನು ನಡೆಸಿ, ಉತ್ತಮ ರಾಜ್ಯದ ಪರಿಕಲ್ಪನೆಯನ್ನು ಪ್ರಪಂಚಕ್ಕೆ ಪರಿಚಯಿಸಿದ್ದು ಶ್ರೀ ರಾಮ. ಅಂದು ಶ್ರೀರಾಮ ನೀಡಿದ ಜನಸ್ನೇಹಿ ಆಡಳಿತವೇ ರಾಮರಾಜ್ಯ. ಇಡೀ ಮನುಕುಲವೇ ಪೂಜಿಸಿ, ಆರಾಧಿಸುವ ಮಹಾನ್ ಸಾಮ್ರಾಟ ಶ್ರೀರಾಮ. ರಾವಣನಂತ ಮಹಾನ್ ವಿರೋಧಿಗಳು ಎದುರಾದರೂ ಸಹ ಕೊನೆಗೂ ಜಯ ಸಿಕ್ಕಿದ್ದು ಶ್ರೀರಾಮನಿಗೆ. ಅಂತಹ ಮರ್ಯಾದಾ ಪುರುಷೋತ್ತಮ ಶ್ರೀರಾಮ ಜನಸಿದ ಪವಿತ್ರ ದಿನವೇ ಈ ಶ್ರೀರಾಮ ನವಮಿ ಆಚರಣೆ. ಭರತಖಂಡದಲ್ಲಿ ಮಾತ್ರವಲ್ಲದೆ ‘ರಾಮನಾಮ’ ಜಗತ್ತಿನ ಬೇರೆ ಬೇರೆ ದೇಶಗಳಲ್ಲೂ ಝೇಂಕರಿಸುತ್ತದೆ.ಅದಕ್ಕೆ ಕಾರಣ ರಾಮ ನೀಡಿದ ಭ್ರಷ್ಟಾಚಾರ ಮುಕ್ತ ಮತ್ತು ಜನಸ್ನೇಹಿ…

Read More

ಒಂದು ಬಾರಿ ಅವಕಾಶ ನೀಡಿ, ಖಂಡಿತ ಕ್ಷೇತ್ರದಲ್ಲಿ ಹೊಸ ಬದಲಾವಣೆ ತರುತ್ತೇನೆ – ಕೆ. ವಿ. ನವೀನ್ ಕಿರಣ್

ಚಿಕ್ಕಬಳ್ಳಾಪುರ : ನಗರದ 4 ನೇ ವಾರ್ಡನ ದರ್ಗಾಮೌಲಾದಲ್ಲಿ ಚುನಾವಣಾ ಪ್ರಯುಕ್ತ ಹೊಸ ಕಛೇರಿ ಉದ್ಘಾಟಿಸಿ ಮಾತನಾಡಿದ ಅವರು. ಇದು ಬದಲಾವಣೆ ತರುವ ಸಮಯ. ಈ ಬದಲಾವಣೆಯ ಹೋರಾಟದಲ್ಲಿ ಪ್ರತಿಯೊಬ್ಬ ನಾಗರಿಕ ಸಹ ಭಾಗಿ ಆಗಬೇಕು ಎಂದರು. ಹೊಸ ಕಚೇರಿ ಉದ್ಘಾಟನೆ ನಂತರ ಪ್ರತಿ ಮನೆ ಮನೆಗೂ ತೆರಳಿ ಚುನಾವಣಾ ಪ್ರಚಾರ ನಡೆಸಿದರು. ಇದೊಂದು ಬಾರಿ ಚುನಾವಣೆಯಲ್ಲಿ ತಮ್ಮನ್ನು ಬೆಂಬಲಿಸಿ. ಅವಕಾಶ ಕೊಡಿ. ಖಂಡಿತ ಈ ಕ್ಷೇತ್ರದಲ್ಲಿ ಬದಲಾವಣೆ ತರುತ್ತೇನೆ. ನಾವೆಲ್ಲರೂ ಸೇರಿ ಕ್ಷೇತ್ರದಲ್ಲಿ ಹೊಸ ಬದಲಾವಣೆ ತರಬೆಕಿದೆ ಎಂದರು. ದರ್ಗಾಮೌಲಾದ ಅನೇಕ ಅಲ್ಪಸಂಖ್ಯಾತ ಮುಖಂಡರು, ಮಹಿಳೆಯರು ಮತ್ತು ಯುವಕರು ನವೀನ್ ಕಿರಣ್ ಪರವಾಗಿ ಬೆಂಬಲವಾಗಿ ಮತಯಾಚನೆ ಮಾಡಿದರು.    

Read More

ಚುನಾವಣೆಯಲ್ಲಿ ಕೆ.ವಿ. ನವೀನ್ ಕಿರಣ್ ಅವರ ಬೆಂಬಲಕ್ಕೆ ಸಮಾಜವಾದಿ ಪಕ್ಷ ಬೆಂಬಲಿಸುತ್ತದೆ – ರಾಜ್ಯಾಧ್ಯಕ್ಷ ರಾಬಿನ್ ಮ್ಯಾಥುಸ್ ಘೋಷಣೆ.

ಚಿಕ್ಕಬಳ್ಳಾಪುರ : ಆದರ್ಶ ವ್ಯಕ್ತಿತ್ವವುಳ್ಳ ಜನನಾಯಕರು ಇವತ್ತು ಬೇಕಾಗಿದ್ದಾರೆ, ಅಂಥವರಲ್ಲಿ ಚಿಕ್ಕಬಳ್ಳಾಪುರದ ಕೆ.ವಿ. ನವೀನ್ ಕಿರಣ್ ಕೂಡಾ ಒಬ್ಬರು ಎಂದು ಸಮಾಜವಾದಿ ಪಕ್ಷದ  ರಾಜ್ಯಾಧ್ಯಕ್ಷರಾದ ರಾಬಿನ್ ಮ್ಯಾಥುಸ್ ಹೇಳಿದರು. ಸಿ.ವಿ.ವಿ ಕ್ಯಾಂಪಸ್ ನಲ್ಲಿ ಸಮಾಜ ಸೇವಕ ಕೆ.ವಿ. ನವೀನ್ ಕಿರಣ್ ಅವರನ್ನು ಭೇಟಿ ಮಾಡಿ ಮಾತನಾಡಿದ ಅವರು ನವೀನ್ ಕಿರಣ್ ಅವರು ಮಾಡಿರುವ ಸಾಮಾಜಿಕ ಹಾಗೂ ಜನಪರ ಕಾರ್ಯಕ್ರಮಗಳು  ನಿಜಕ್ಕೂ ಶ್ಲಾಘನೀಯ. ಇಂಥಹ ಸರಳ ವ್ಯಕ್ತಿತ್ವದ ನಾಯಕರು ರಾಜಕೀಯಕ್ಕೆ ಬರಬೇಕು. ಇವರ ಸಮಾಜಿಕ ಕಾಳಜಿ, ಬದ್ಧತೆ ಮೆಚ್ಚುವಂತದ್ದು. ನವೀನ್ ಕಿರಣ್ ಅವರ ಕಾರ್ಯಗಳನ್ನು ಮೆಚ್ಚಿ ಈ ಬಾರಿಯ ಚುನಾವಣೆಯಲ್ಲಿ ಅವರನ್ನು ಸಂಪೂರ್ಣವಾಗಿ ನಾವೂ ಹಾಗೂ ನಮ್ಮ ಪಕ್ಷದ ವತಿಯಿಂದ ಅವರನ್ನು ಬೆಂಬಲಿಸುತ್ತೇವೆ ಎಂದು ಹೇಳಿದರು.    

Read More

ಅಜ್ಜವರ ಗ್ರಾಮದಲ್ಲಿ ಉಚಿತ ನೇತ್ರ ಚಿಕಿತ್ಸಾ ಶಿಭಿರ

ಚಿಕ್ಕಬಳ್ಳಾಪುರ ತಾಲ್ಲೂಕಿನ ಅಜ್ಜವಾರ ಗ್ರಾಮದಲ್ಲಿ ದೃಷ್ಟಿ ಕಣ್ಣಿನ ಆಸ್ಪತ್ರೆ ಹಾಗೂ ಕೆ ವಿ ನವೀನ್ ಕಿರಣ್ ಅಭಿಮಾನಿಗಳ ಸಂಘದ ವತಿಯಿಂದ ಉಚಿತ ನೇತ್ರ ತಪಾಸಣಾ ಶಿಬಿರವನ್ನು ಏರ್ಪಡಿಸಿಲಾಗಿತ್ತು. ಶಿಭಿರಕ್ಕೆ ಭೇಟಿ ನೀಡಿದ ಸಮಾಜ ಸೇವಕ ಶ್ರೀ ಕೆ ವಿ ನವೀನ್ ಕಿರಣ್ ತಪಾಸಣೆಗೆ ಒಳಗಾದ ಹಿರಿಯರಿಗೆ ಉಚಿತ ಕನ್ನಡಕ ವಿತರಿಸಿ ಮಾತನಾಡಿದ ಅವರು. ದೃಷ್ಟಿ ಕಣ್ಣಿನ ಆಸ್ಪತ್ರೆ ಹಾಗೂ ಯುವಕರ ಬಳಗ ಒಂದು ಅತ್ಯುತ್ತಮ ಸಮಾಜಿಕ ಕೆಲಸ ಮಾಡುತ್ತಿದ್ದರೆ. ಇದು ಶ್ಲಾಘನೀಯ ಎಂದರು. ಅಜ್ಜವಾರ ಗ್ರಾಮ ಸೇರಿದಂತೆ ಸುತ್ತಲಿನ ಅನೇಕ ಗ್ರಾಮಗಳ ಜನರು ಶಿಭಿರದಲ್ಲಿ ಭಾಗಿಯಾಗಿ ಕಣ್ಣಿನ ತಪಾಸಣೆ ಮಾಡಿಕೊಂಡರು.

Read More

Eye and Health Checkup camp PPHS

ಚಿಕ್ಕಬಳ್ಳಾಪುರ ನಗರದ ಪಂಚಗಿರಿ ಭೋದನ ಪ್ರೌಢಶಾಲೆಯಲ್ಲಿ ಶ್ರೀ ಕೆ.ವಿ.ಮತ್ತು ಪಂಚಗಿರಿ ಶಿಕ್ಷಣ ಸಂಸ್ಥೆ ಹಾಗೂ ಶಾಲೆಯ ಹಿರಿಯ ವಿದ್ಯಾರ್ಥಿಗಳ ಸಂಘದಿಂದ ಹಮ್ಮಿಕೊಂಡಿದ್ದ ನೇತ್ರ ಹಾಗೂ ಆರೋಗ್ಯ ತಪಾಸಣ ಶಿಬಿರದಲ್ಲಿ ನಗರ ಸೇರಿದಂತೆ ಗ್ರಾಮಾಂತರ ಭಾಗದ ನೂರಾರು ಮಂದಿ ಶಿಬಿರದ ಪ್ರಯೋಜನೆ ಪಡೆದರು. ಶಿಬಿರಕ್ಕೆ ಚಾಲನೆ ನೀಡಿದ ಸಂಸ್ಥೆಯ ಅಧ್ಯಕ್ಷ ಕೆ.ವಿ.ನವೀನ್ ಕಿರಣ್ ಮಾತನಾಡಿ, ನೇತ್ರದಾನದಿಂದ ಅಂಧರಿಬ್ಬರ ಬಾಳಿಗೆ ಬೆಳಕು ನೀಡಬಹುದಾಗಿದ್ದು, ಸತ್ತ ನಂತರವೂ ತಾವೂ ಮಾಡಿದ ಕಣ್ಣುಗಳ ದಾನದ ಮೂಲಕ ಬದುಕಬಹುದಾಗಿದೆ ಎಂದು ಅಭಿಪ್ರಾಯಪಟ್ಟರು. ಪ್ರತಿಯೊಬ್ಬ ಮನುಷ್ಯನು ತನ್ನ ಆರೋಗ್ಯದ ಬಗ್ಗೆ ಅತ್ಯಂತ ಕಾಳಜಿವಹಿಸಬೇಕು ಎಂದು ಸಲಹೆ ನೀಡಿದ ನವೀನ್‍ಕಿರಣ್, ದಿನನಿತ್ಯದ ಚಟುವಟಿಕೆಯಲ್ಲಿ ಯೋಗ ಕ್ರೀಡೆಗಳಲ್ಲಿ ಬಾಗವಹಿಸುವುದನ್ನು ರೂಢಿಸಿಕೊಂಡು, ದೈಹಿಕ ಹಾಗೂ ಮಾನಸಿಕವಾಗಿ ಆರೋಗ್ಯವಂತರಾಗಿ ಎಂದರು.      

Read More

Azad Janmadinotsava

ಅಮರ ಕ್ರಾಂತಿಕಾರಿ ಚಂದ್ರಶೇಕರ್ ಆಜದ್ – ಯುವ ನಾಯಕ ಕೆ.ವಿ.ನವೀನ್ ಕಿರಣ್ ಚಿಕ್ಕಬಳ್ಳಾಪುರ :- ನಗರದಲ್ಲಿ ಚಂದ್ರಶೇಖರ್ ಅಜಾದ್ ಯುವಕರ ಸಂಘದ ವತಿಯಿಂದÀ ಚಂದ್ರಶೇಖರ್ ಅಜಾದ್ ಅವರ 111 ನೇ ಜನ್ಮದಿನಾಚರಣೆ ಪ್ರಯುಕ್ತ ನಗರದಲ್ಲಿ ಅನ್ನ ಸಂತರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಚಿಕ್ಕಬಳ್ಳಾಪುರದ ಯುವ ನಾಯಕ , ಕೆ.ವಿ ಮತ್ತು ಪಂಚಗಿರಿ ವಿಧ್ಯಾದತ್ತಿಗಳ ಅಧ್ಯಕ್ಷರಾದ ಶ್ರೀ. ಕೆ ವಿ ನವೀನ್ ಕಿರಣ್ ಮಾತನಾಡಿ ಚಂದ್ರಶೇಖರ್ ಅಜದ್ ಒಬ್ಬ ಅಮರ ಕ್ರಾಂತಿಕಾರಿ, ಯುವ ಜನಾಂಗಕ್ಕೆ ಸ್ಪೂರ್ತಿ. ತನ್ನ ಬಾಲ್ಯದಲ್ಲೇ ದೇಶದ ಸ್ವತಂತ್ರಕ್ಕಾಗಿ ಕುಟುಂಬವನ್ನೇ ತೊರೆದ ಕ್ರಾಂತಿಕಾರಿ. ಇವತ್ತಿನ ಯುವ ಪಿಳಿಗೆ ಅಜಾದ್, ಭಗತ್ ಸಿಂಣ್ ಮುಂತಾದವರ ಜೀವನ ಚರಿತ್ರೆ ತಿಳಿದುಕೊಳ್ಳ ಬೇಕಾಗಿದೆ. ದೇಶ ಹಾಗೂ ಸಮಾಜ ಸೇವೆಯಲ್ಲಿ ಮುಂದಾಗ…

Read More

https://play.google.com/store/apps/details?id=mobi.androapp.ourleaderkvnk.c3184