Headline
C V V and K V N K have done many things to see our Chickballapura developed in every possible way. Now It's our turn to unite and do something in return

ಚಿಕ್ಕಬಳ್ಳಾಪುರದ ಚಿರಂತನ ವಿದ್ಯಾಜ್ಯೋತಿ – ಸಿವಿವಿ

SHARE THIS!

 ಚಿಕ್ಕಬಳ್ಳಾಪುರದ ಚಿರಂತನ ವಿದ್ಯಾಜ್ಯೋತಿಸಿವಿವಿ

 

ಚಿಕ್ಕಬಳ್ಳಾಪುರ, ನಾಡು-ನುಡಿಗೆ ಮಾತ್ರವಲ್ಲದೇ ರಾಷ್ಟ್ರ, ಅಂತಾರಷ್ಟ್ರ ಮಟ್ಟದಲ್ಲಿ ಅವಿಸ್ಮರಣೀಯ ಕೊಡುಗೆಯನ್ನು ನೀಡಿದೆ. ವಿಶ್ವಕಂಡ ಶ್ರೇಷ್ಠ ಇಂಜಿನಿಯರ್ ಸರ್. ಎಂ ವಿಶ್ವೇಶ್ವರಯ್ಯ ಅವರನ್ನು ಜಗತ್ತಿಗೆ ನೀಡಿದ ಜಿಲ್ಲೆ ಚಿಕ್ಕಬಳ್ಳಾಪುರ. ಹಾಗೇ ಕನ್ನಡ ನಾಡು ಕಂಡ ಶ್ರೇಷ್ಠ ಶಿಕ್ಷಣ ಪ್ರೇಮಿ, ಜ್ಞಾನದಾಸೋಹಿಗಳ ಸಾಲಿನಲ್ಲಿ ಅಗ್ರಗಣ್ಯರಾಗಿ ನಿಲ್ಲುವ ಜ್ಞಾನಜ್ಯೋತಿ ಸಿವಿವಿ ಅವರು ಸಹ ಚಿಕ್ಕಬಳ್ಳಾಪುರದವರೆ. ಸಿವಿವಿ ಎಂದೇ ಜನಮನದಲ್ಲಿ ನೆಲೆಸಿರೋ ಶ್ರೀ ಕರ್ನಕಂಟಿ ವೆಂಕಟತೆಪ್ಪ ವೆಂಕಟರಾಯಪ್ಪನವರು ಅವಿಭಜಿತ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆ ಕಂಡ ಶ್ರೇಷ್ಠ ಶಿಕ್ಷಣ ಪ್ರೇಮಿ, ಸಮಾಜ ಸೇವಕ, ರಾಜಕೀಯ ಮತ್ಸದ್ದಿ, ರಾಜಕೀಯ, ಶೈಕ್ಷಣಿಕ, ಸಾಮಾಜೀಕ, ಧಾರ್ಮಿಕ ಕ್ಷೇತ್ರಗಳಿಗೆ ಅಪರಿಮಿತ ಸೇವೆ ಸಲ್ಲಿಸಿದವರು ಶ್ರೀಯುತ ಸಿವಿವಿ.

ಶ್ರೀಯುತ ಸಿ. ವಿ. ವೆಂಕಟರಾಯಪ್ಪನವರ ಜನನ

ಹಿಂದೂ ಸ್ಥಾನದ ಪಾವನ ಮಣ್ಣಿನಲ್ಲಿ ನಂದಿಗಿರಿದಾಮದ ಸುಂದರ ತಪ್ಪಲಿನಲ್ಲಿ ಮಹಾಭಾರತದ ಶ್ರೀ ಕೃಷ್ಣ ಹೇಳುವ ವಸುದೈವಕುಟುಂಬಕಂ ಎಂಬ ತತ್ವದಡಿಯಲ್ಲಿ ಸಾಗುತ್ತಿದ್ದದ್ದು ಕರ್ನಕಂಟಿ ಕುಟುಂಬ. ಈ ಕುಟುಂಬದ ಸಮಾಜಿಕ ಕಾಳಕಳಿಯುಳ್ಳ ಜೀವಿ ಶ್ರೀ ವೆಂಕಟಪತೆಪ್ಪ ಹಾಗೂ ಶ್ರೀಮತಿ ವೆಂಕಟನರಸಮ್ಮ ದಂಪತಿಗಳ ಸುಪುತ್ರನಾಗಿ 1915 ಜುಲೈ 30 ರಂದು ಜನಸಿದ ಶ್ರೀ ವೆಂಕಟರಾಯಪ್ಪನವರು. ತಂದೆ -ತಾಯಿ ಮಾರ್ಗದರ್ಶನದಲ್ಲಿ ತಮ್ಮ ಬಾಲ್ಯ ಕಳೆದರು.

ಬಾಲ್ಯ ಮತ್ತು ಶಿಕ್ಷಣ

ತಂದೆ ಶ್ರೀ ಕರ್ನಕಂಟಿ ವೆಂಕಟಪತೆಪ್ಪ ಚಿಕ್ಕಬಳ್ಳಾಪುರ ಪುರಸಭಾ ಸದಸ್ಯರಾಗಿದ್ದವರು, ಅಪಾರ ಸಮಾಜೀಕ ಕಳಕಳಿಯುಳ್ಳ ವ್ಯಕ್ತಿತ್ವದವರು. ತಂದೆಯ ಮಾರ್ಗದರ್ಶನದಲ್ಲಿ ಬೆಳೆದು ಬಂದ ಸಿವಿವಿ ಯವರು ಹಂತ ಹಂತವಾಗಿ ಸಾಧನೆಯ ಶಿಖರವನ್ನು ಏರಿದರು. ತಮ್ಮ ಬಿ.ಎ. ಪದವಿಯನ್ನು ಮುಗಿಸಿ ಉನ್ನತ ಶಿಕ್ಷಣಕ್ಕಾಗಿ ದೂರದ ಪೂನಾಗೆ ಹೋದರು. ಪೂನಾದಲ್ಲಿ ಪ್ರಥಮ ಲಾ ಓದುತ್ತಿರುವಾಗ ತಂದೆಯವರ ಆದೇಶದ ಮೆರೆಗೆ ಲಾ ಶಿಕ್ಷಣವನ್ನು ಅರ್ಧಕ್ಕೆ ಮೊಟುಕುಗೊಳಿಸಿ ಚಿಕ್ಕಬಳ್ಳಾಪುರಕ್ಕೆ ಹಿಂತಿರುಗಿದರು. ಪೂನಾದಿಂದ ಹಿಂದಿರುಗಿದ ಸಿವಿವಿ ಅವರಿಗೆ ಇಲ್ಲಿ ಒಂದು ಆಶ್ಚರ್ಯ ಕಾದಿತ್ತು. ಶ್ರೀ ವೆಂಕಟತೆಪ್ಪನವರು ತಮ್ಮಿಂದಾಗಾದ ಅನೇಕ ಸಾಮಾಜಿಕ ರಾಜಕೀಯ ಶೈಕ್ಷಣಿಕ ಕ್ರಾಂತಿಗಳನ್ನು ಮಾಡಲು ಸಿವಿವಿ ಅವರಿಗೆ ಜವಬ್ದಾರಿಯನ್ನು ವಹಿಸಿದರು. ತಂದೆಯ ಆಶಯದಂತೆ ಸಮಾಜೀಕ ಬದಲಾವಣೆಯ ಹೊಣೆಹೊತ್ತ ಸಿವಿವಿ ಅವರು ರಾಜಕೀಯ ರಂಗವನ್ನು ಪ್ರವೇಶಿಸಿದರು.

 ಶ್ರೀಯುತ ಸಿ.ವಿ.ವೆಂಕಟರಾಯಪ್ಪನವರ ಕುಟುಂಬ

ಶ್ರೀ ಸಿ.ವಿ.ವೆಂಕಟರಾಯಪ್ಪನವರ ಧರ್ಮಪತ್ನಿ ಶ್ರೀಮತಿ ಸಿ.ವಿ.ಕಮಲಮ್ಮನವರು ಈ ದಂಪತಿಗಳಿಗೆ ಲೀಲಾ, ಗೀತಾ, ನಿರ್ಮಲಾ ಮೂವರು ಮಕ್ಕಳು ಆದರ್ಶ ಸಖೀ ಕುಟುಂಬ.
ಬಂಧು ಬಾಂಧವರು ಹಿತೈಶಿಗಳು ಅಭಿಮಾನಿಗಳ ಎಲ್ಲರೂ ಸೇರಿದರೆ ಅದೊಂದು ಅಪೂರ್ವ ಅಭಿವ್ಯಕ್ತ ಕುಟುಂಬ.

ಸಿ.ವಿ.ವೆಂಕಟರಾಯಪ್ಪನವರ ವ್ಯಕ್ತಿತ್ವ

ಸಾರ್ವಜನಿಕ ಜೀವನದಲ್ಲಿ ಸೇವಾಮನೋಭಾವ ಬೆಳೆಯಬೇಕು. ಅಧೀಕಾರ ಬರುವುದು ಜನತೆಯ ಸೇವೆಗಗಿಯೇ ಹೊರತು ವೈಕ್ತಿಕ ಲಾಭಕಲ್ಲ. ರಾಜಕಾರಣದಲ್ಲಿ ಪ್ರಾಮಾಣಿಕತೆ ಮತ್ತು ಸನ್ನಡತೆಯಿಂದ ಬದುಕ ಬೇಕು. ಯುವಜನಾಂಗದಲ್ಲಿ ರಾಷ್ಟ್ರಸೇವೆ ಮಾಡುವ ಸ್ವಸಾಮಥ್ರ್ಯ ರಕ್ತಗತವಾಗಬೇಕು
ಸಿ.ವಿ.ವಿ             

                                                                                                         

ಸಿವಿವಿ ಅವರ ಈ ಮಾತು ಕೇಳಿದರೆ ಸಾಕು ಅವರ ಇಡೀ ವ್ಯಕ್ತಿತ್ವವನ್ನು ಅರಿಯಬಹುದು. ಸಾಮಾನ್ಯರೂ ಅರ್ಥಮಾಡಿಕೊಳ್ಳ ಬಹುದಾದ ಸರಳ ವ್ಯಕ್ತಿತ್ವ ಅವರದ್ದು. ತಂದೆಯಂತೆ ಸಮಾಜೀಕ ಕಾಳಕಳಿಯುಳ್ಳ ಮಹಾ ಮಾನವತಾವಾದಿ, ಅಷ್ಟೇ ರಾಜಕೀಯ ಚತುರರು ಆಗಿದ್ದರು. ಇದೆಲ್ಲ ತಂದೆಯಿಂದ ಕಲಿತ ವಿದ್ಯ. ಇನ್ನು ಬಡವರ ಬಗೆಗೆ ಕಾಳಜಿ, ಧಾರ್ಮಿಕ ಆಚರಣೆ ಇವು ತಾಯಿ ಶ್ರೀಮತಿ ವೆಂಕಟನರಸಮ್ಮ ಅವರಿಂದ ಬಳುವಳಿಯಾಗಿ ಬಂದ ಗುಣಗಳು. ಸಿವಿವಿ ಯವರು ಸರಳ ಹಾಗೂ ಸಜ್ಜನಿಕ ವ್ಯಕ್ತಿ. ಅಷ್ಟೇ ಶಿಸ್ತಿನ ಸಿಪಾಯಿಗಳು ಕೂಡ. ಕ್ರೀಡಾ ಕ್ಷೇತ್ರದಲ್ಲಿ ಅತೀವ ಆಸಕ್ತಿಯಿದ್ದ ಸಿವಿವಿ ಕ್ರೀಡಾಕ್ಷೇತ್ರಕ್ಕೂ ಅಪಾರ ಕೊಡುಗೆ ನೀಡಿದ್ದಾರೆ. ಚಿಕ್ಕಬಳ್ಳಾಪುರ ಮಾತ್ರವಲ್ಲ ಇಡೀ ಕನ್ನಡ ನಾಡು ಮರೆಯದಂತ ಕೊಡುಗೆ ಅಂದರೆ ಆದು ಅವರ ಶೈಕ್ಷಣಿಕ ಕ್ರಾಂತಿ. ಹಿಂದುಳಿದ ಗಡಿ ಜಿಲ್ಲೆಗಳ ಸರ್ವತೋಮುಖ ಅಭಿವೃದ್ಧಿ ಶಿಕ್ಷಣದಿಂದ ಮಾತ್ರ ಸಾಧ್ಯ ಎಂಬ ಸತ್ಯವನ್ನು ಅರಿತಿದ್ದ ಶ್ರೀ ಸಿ.ವಿ. ವೆಂಕಟರಾಯಪ್ಪನವರು ಚಿಕ್ಕಬಳ್ಳಾಪುರದಲ್ಲಿ ಶೈಕ್ಷಣಿಕ ಕ್ರಾಂತಿಯನ್ನೇ ಮಾಡಿದರು.

 

ರಾಜಕೀಯ ಜೀವನ

ದೂರದ ಉನ್ನತ ಶಿಕ್ಷಣಕ್ಕಾಗಿ ದೂರದ ಪೂನಾಗೆ ಹೋಗಿದ್ದ ಸಿವಿವಿ ಅವರು ತಂದೆಯ ಆದೇಶದ ಮೇರಗೆ ವಿದ್ಯಾಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸಿ ಚಿಕ್ಕಬಳ್ಳಾಪುರಕ್ಕೆ ಆಗಮಿಸುತ್ತಾರೆ. ಆಗ ಅವರಿಗೊಂದು ಆಶ್ಚರ್ಯ ಕಾದಿರುತ್ತೆ. ಅದೇನೆಂದರೆ ತಂದೆ ಶ್ರೀ ವೆಂಕಟಪತೆಪ್ಪನವರು ಮಗನಿಗೆ ತಮ್ಮ ಜವಬ್ದಾರಿಗಳನ್ನು ಜೊತೆಗೆ ತಾವು ಸಮಾಜಿಕ, ರಾಜಿಕೀಯ ಹಾಗೂ ಶಕ್ಷಣಿಕ ರಂಗದಲ್ಲಿ ಕಂಡ ಕನಸುಗಳನ್ನು ನನಸಾಗಿಸುವ ಗುರುತರ ಜವಬದಾರಿಗಳನ್ನು ವಹಿಸುತ್ತಾರೆ. ತಮ್ಮ ತಂದೆಯವರು ಯಾವುದೇ ನಿರ್ಧಾ ಕೈಗೊಂಡರೂ ಅದು ತಮ್ಮ ಹಾಗೂ ಸಮಾಜದ ಶ್ರೇಯಸ್ಸಿಗೆ ಎಂಬುದನ್ನು ಮನಗಂಡಿದ್ದ ಸಿವಿವಿ ತಂದೆ ವಹಿಸಿದ ಜವಬ್ದಾರಿಗಳನ್ನು ಕೊನೆಯ ತನಕ ಅತ್ಯುತ್ತಮವಾಗಿ ನಿರ್ವಹಿಸಿದರು.
ತಂದೆಯ ಕನಸ್ಸಿನಂತೆ ರಾಜಕೀಯಕ್ಕೆ ಪಾದರ್ಪಣೆ ಮಾಡಿದ ಸಿವಿವಿ ಅವಿಭಜಿತ ಕೊಲಾರ ಹಗೂ ಚಿಕ್ಕಬಳ್ಳಾಪುರ ಜಿಲ್ಲೆಯ ರಾಜಕೀಯ ಭೀಷ್ಮ್ ಎಂದೇ ಕರೆಸಿಕೊಂಡರು. 1942 ರಲ್ಲಿ ಮೊದಲಬಾರಿಗೆ ಪುರಸಭಾ ಸದಸ್ಯರಾಗಿ ಆಯ್ಕೆಯಾಗುವ ಮೂಲಕ ಆರಂಭವಾದ ರಾಜಕೀಯ ಜೀವನ, 1998 ರವರೆಗೆ ಅಂದರೆ, ಸುಧೀರ್ಘ 54 ವರ್ಷಗಳ ಸಾರ್ವಜನಿಕ ಜೀವನದಲ್ಲಿ ಒಂದೆ ಒಂದು ಕಪ್ಪು ಚುಕ್ಕೆಯೂ ಇಲ್ಲದೆ. ಪ್ರಾಮಾಣಿಕ, ನೈತಿಕ ರಾಜಕಾರಣಿಯಾಗಿ ಬದುಕಿದವರು ಶ್ರೀ ಸಿವಿವಿ.  23 ವರ್ಷ 8 ತಿಂಗಳುಕಾಲ ಪುರಸಭೆಯ ಸದಸ್ಯರಾಗಿ ಕರ್ತವ್ಯ ನಿರ್ವಹಿಸಿ ಹೊಸದೊಂದು ಧಾಖಲೆ ನಿರ್ಮಿಸಿದವರು ಸಿವಿವಿ ಅವರು. ಇನ್ನು ರಾಜ್ಯ ರಜಕಾರಣದಲ್ಲೂ ಸಿವಿವಿ ಸಾಮ್ರಾಜ್ಯವಿತ್ತು. 1967 , 1972, ಹಾಗೂ 1989 ಮೂರು ಅವಧಿಗೆ ಶಾಸಕಾರಾಗಿ ಆಯ್ಕೆಯಾಗಿದ್ದ ಸಿವಿವಿ ರಾಜ್ಯ ರಾಜಕೀಯ ವಲಯದಲ್ಲಿ ತಮ್ಮದೇ ಆದ ಸ್ಥಾನ ಹೊಂದಿದ್ದರು. ಅವರ ರಜಕೀಯ ನಿಪುಣತೆಯಿಂದ ಅನೇಕ ಜನರು ಅಧೀಕಾರ ಪಡೆದಿದ್ದಾರೆ. ಹೀಗಾಗಿಯೇ ಈ ಭಾಗದಲ್ಲಿ ಸಿವಿವಿ ಅವರನ್ನು ರಾಜಕೀಯ ಭೀಷ್ಮ ಎಂದೇ ಜನ ಕರೆಯುತ್ತಾರೆ. ತುಂಬಾನೆ ದೂರ ದೃಷ್ಠಿಯುಳ್ಳ ಸಿವಿವಿ ಚಿಕ್ಕಬಳ್ಳಾಪುರ ಜಿಲ್ಲೆಗೆ ಅವಿಸ್ಮಾರಣೀಯ ಕೊಡುಗೆ ನೀಡಿದ್ದಾರೆ. ಜಾತಿ, ಧರ್ಮ, ಪಕ್ಷ ಬೇಧವಿಲ್ಲದೆ ಎಲ್ಲರನ್ನೂ ಸಮಾನವಗಿ ಕಣುತ್ತಿದ್ದರು.

 

ಶಿಕ್ಷಣ ಪ್ರೇಮಿಸಿವಿವಿ

ಶೈಕ್ಷಣಿಕ ಕ್ಷೇತ್ರಕ್ಕೆ ಸಿವಿವಿ ನೀಡಿದ ಕೊಡುಗೆ ಅಪಾರವದದ್ದು. ಶಿಕ್ಷಣದಿಂದ ಮಾತ್ರವೇ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿ ಸಧ್ಯ ಎಂಬುದರ ಅರಿವಿದ್ದ ಸಿವಿವಿ ಶೈಕ್ಷಣಿಕ ಕ್ರಾಂತಿಗೆ ಮುನ್ನುಡಿ ಬರೆದರು. ತಮ್ಮ ಕ್ಷೇತ್ರದ ವಿಧ್ಯಾರ್ಥಿಗ ಗಳ ಬಗ್ಗೆ ಅತೀವ ಕಾಳಜಿಯಿದ್ದ ಶ್ರೀ ವೆಂಕಟರಾಯಪ್ಪ ನವರು. ತಾವೇ ಕಲೇಜನ್ನು ಪ್ರಾರಂಭಿಸಿದರು. ಬಡ ಮಕ್ಕಳಿಗೂ ಶಿಕಣ ದೊರೆಯುವಂತಾಗ ಬೇಕು ಅನ್ನೋ ಮಹದಾಸೆಯಿಂದ ದತ್ತಿ ಶಿಕಣ ಸಂಸ್ಥೆಯನ್ನು ಆರಂಬಿಸಿದರು. ಇವತ್ತು ಸಾವಿರರೂ ಜನರು ಇವರ ಶಿಕಣ ಸಂಸ್ಥೆಯಲ್ಲಿ ವಿಧ್ಯಾಭ್ಯಾಸ ಮಡಿ ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಉನ್ನತ ಸ್ಥಾನಗಳಲ್ಲಿದ್ದಾರೆ. ಸಾವಿರರು ಜನರಿಗೆ ಉದ್ಯೋಗ ನೀಡಿದ್ದಾರೆ. ಇವತ್ತು ಚಿಕ್ಕಬಳ್ಳಾಪುರ ಅಂದ್ರೆ ನೆನಪಾಗೋದು ಸಿವಿವಿ ಕ್ಯಾಂಪಸ್.

 

ಬಲೀಜ ಸಮ್ಮೇಳನ

ಸಿವಿವಿ ಅವರು ತಮ್ಮ ಇಡೀ ಜೀವನವನ್ನು ಸಮಾಜಕ್ಕೆ ಮುಡುಪಾಗಿ ಇಟ್ಟವರು. ಸಮ ಸಮಾನತೆಯ ತಳಹದಿ ಮೇಲೆ ಸಮಾಜವನ್ನು ಕಟ್ಟಿದವರು. ಎಲ್ಲ ಜಾತಿ ಧರ್ಮಗಳನ್ನು ಸಮನಾಗಿ ಕಾಣುತ್ತಿದ್ದ ಸಿವಿವಿ. ತಮ್ಮ ಕುಲ ಬಾಂಧವರಿಗೂ ಅಪಾರ ಕೊಡುಗೆಯನ್ನ ನೀಡಿದರು. ಎಲ್ಲೋ ಒಂದು ಕಡೆ ತಮ್ಮ ಜನಾಂಗದವರು ಒಗ್ಗೂಡ ಬೇಕು. ಸಮಾಜೀಕವಾಗಿ, ರಾಜಕೀಯವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಸಧೃಡರಗ ಬೇಕು ಅನ್ನೋ ಮಹದಾಸೆ ಹೊಂದಿದ್ದರು. ಹೀಗಾಗಿಯೇ 1994 ರಲ್ಲಿ ರಜ್ಯಮಟ್ಟದ ಬಲಿಜ ಸಮ್ಮೇಳನವನ್ನು ಆಯೋಜಿಸಿ ಬಲಿಜ ಸಮಾಜದ ಅಭಿವೃದ್ಧಿಗೆ ಮುನ್ನುಡಿ ಬರೆದರು.
1994ನೇ ಇಸವಿ ಮಾರ್ಚ್ 5ನೇ ತಾರೀಖು ಚಿಕ್ಕಬಳ್ಳಾಪುರದ ಕ್ಯಾಂಪಾಸ್‍ನಲ್ಲಿ ರಾಜ್ಯಮಟ್ಟದ ಬಲಿಜ ಸಮ್ಮೇಳನ ನಡೆಸಿದರು. ಇದು ಯಾವ ಮಟ್ಟಕ್ಕೆ ನಡೆಯಿತು, ಎಂದರೆ 1994ರಲ್ಲಿ ಸುಮಾರು 25000 ಬಲಿಜ ಜನಾಂಗದವರು ಒಂದು ಕಡೆ ಸೇರಿಸಿ ಸಮಾವೇಶ ನಡೆಸಿದರು. ಆಗ ಮುಖ್ಯ ಮಂತ್ರಿಗಳಾಗಿದ್ದವರು ಎಂ.ವೀರಪ್ಪಮೊಯ್ಲಿ ಯವರು ಇವರ ಅಧ್ಯಕ್ಷತೆಯಲ್ಲಿ ಇನ್ನು ಅನೇಕ ಗಣ್ಯರು ಈ ಕಾರ್ಯಕ್ರಮದ ರೂವಾರಿಗಳಾಗಿದ್ದರು. ಈ ಕಾರ್ಯಕ್ರಮಕ್ಕೆ ಪದ್ಮ ವಿಭೂಷಣ. ಸಿ.ಡಿ.ನರಸಿಂಹಯ್ಯನವರು ಬಲಿಜ ಜನಾಂಗದ ಎಂ.ಎಸ್.ರಾಮಯ್ಯನವರು, ಎನ್.ವೆಂಕಟೇಶಯ್ಯನವರು, ಜಯರಾಂ ರವರು, ಗೋಪಿನಾಥರವರು, ಮಾಲೂರು ನಾಗರಾಜುರವರು ಎಂ.ಎಲ್.., ಎಂ.ಎಲ್.ಸಿಗಳು ಹಾಜರಿದ್ದರು. ಸಮಾಜ ಸೇವಕ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆಗ ಸಿ.ವಿ.ವೆಂಕಟರಾಯಪ್ಪನವರು ಒಂದು ಮಾತು ಹೇಳಿದರು ಮುಖ್ಯಮಂತ್ರಿ ವೀರಪ್ಪಮೊಯ್ಲಿಯವರೆ ಬಲಿಜ ಸಮಾವೇಶ ಆಯೋಜಿಸಿರುವುದು ನನ್ ಸ್ವಾರ್ಥಕ್ಕೆ ಅಲ್ಲ. ನನಗೆ ಮಂತ್ರಿಗಿರಿ ಬೇಕು ಎಂದಲ್ಲ ನೀವು ಮಂತ್ರಿಗಿರಿ ಕೊಟ್ಟರು ನನಗೆ ಬೇಕಿಲ್ಲ. ನಮ್ಮ ಜನಾಂಗದ ಸಂಘಟನೆ ಎಷ್ಟು ಬಲಿಷ್ಠವಾಗಿದೆ ಎಂದು ನಿಮಗೆ ಮನದಟ್ಟು ಮಾಡಲು ಸಮಾವೇಶ ಏರ್ಪಡಿಸಿದ್ದೇನೆ ಎಂದು 25000 ಜನರ ಹರ್ಷದ್ಗೋರದೊಂದಿಗೆ ತಿಳಿಸಿದರು.

 

ಹೀಗೆ ಹತ್ತಾರು ಜನಪರ ಕಾರ್ಯಗಳನ್ನು ಮಾಡಿದವರು ಶ್ರೀ ಸಿ.ವಿ.ಯವರು ಅದಕ್ಕೆ ಜನರು ಅವರನ್ನು ಪ್ರೀತಿಯಿಂದ ಬಂಗಾರದ ಮನುಷ್ಯ, ದೃವತಾರೆ  ಎಂದು ಕರೆಯುವುದು. ರಾಜಕಾರಣ, ಶಿಕ್ಷಣ, ಧಾರ್ಮಿಕ, ಕ್ರೀಡೆ, ಸಮಾಜಸೇವೆ ಮುಂತಾದ ಕ್ಷೇತ್ರಗಳಲ್ಲಿ “ಆಡುಮುಟ್ಟದಸೊಪ್ಪಿಲ್ಲ” ಎಂಬಂತೆ ಕಾರ್ಯನಿರ್ವಹಿಸಿ ಮೈವಿದ್ಯಮಯ ವರ್ಣರಂಜಿತ ಜೀವನದಲ್ಲಿ ಸಾಪಲ್ಯತೆಯನ್ನು ಕಂಡವರು ಶ್ರೀ ಸಿ.ವಿ.ವೆಂಕಟರಾಯಪ್ಪನವರು.  ಇವರು 1915ರಲ್ಲಿ ಜನಿಸಿ 27-06-1999ರಲ್ಲಿ ನಿಧನರಾದರು. ಈ ಮಧ್ಯೆ ಜನಿಸಿದ್ದ 84 ವರ್ಷಗಳ ಅವಧಿಯಲ್ಲಿ ಶ್ರೀ ಸಿ.ವಿ.ರವರು ಸಾಧಿಸಿದ ದಾಖಲೆಗಳು ಅಚ್ಚಳಿಯದೇ ಉಳಿದಿದ್ದು ವ್ಯಕ್ತಿಗೆ ಸಾವು ಸಾಧನೆಗೆ ಸಾವಿಲ್ಲ ಸಾಧನೆ ಎಂದಿಗೂ ಅಜರಾಮರ ಎಂಬುದಕ್ಕೆ ನಿದರ್ಶನ. ಈ ಜಗತ್ತಿನಲ್ಲಿ ಆಸ್ತಿವಂತರು ಬಹಳಷ್ಟು ಜನದಿದ್ದಾರೆ. ಹೃದಯವಂತರು ಬಹಳ ಕಡಿಮೆ ಆಸ್ತಿಗೆ ಬೆಲೆ ಕಟ್ಟಬಹುದು. ಆದರೆ ಪ್ರೀತಿಸುವ ಹೃದಯಗಳಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಅಂತಹ ಧೀಮಂತ ನಾಯಕ ಶ್ರೀಯುತ ಸಿ.ವಿ.ವೆಂಕಟರಾಯಪ್ಪನವರು.

 

 

 

https://play.google.com/store/apps/details?id=mobi.androapp.ourleaderkvnk.c3184