ಒಂದು ಬಾರಿ ಅವಕಾಶ ನೀಡಿ, ಖಂಡಿತ ಕ್ಷೇತ್ರದಲ್ಲಿ ಹೊಸ ಬದಲಾವಣೆ ತರುತ್ತೇನೆ – ಕೆ. ವಿ. ನವೀನ್ ಕಿರಣ್

SHARE THIS!

ಚಿಕ್ಕಬಳ್ಳಾಪುರ : ನಗರದ 4 ನೇ ವಾರ್ಡನ ದರ್ಗಾಮೌಲಾದಲ್ಲಿ ಚುನಾವಣಾ ಪ್ರಯುಕ್ತ ಹೊಸ ಕಛೇರಿ ಉದ್ಘಾಟಿಸಿ ಮಾತನಾಡಿದ ಅವರು. ಇದು ಬದಲಾವಣೆ ತರುವ ಸಮಯ. ಈ ಬದಲಾವಣೆಯ ಹೋರಾಟದಲ್ಲಿ ಪ್ರತಿಯೊಬ್ಬ ನಾಗರಿಕ ಸಹ ಭಾಗಿ ಆಗಬೇಕು ಎಂದರು.

ಹೊಸ ಕಚೇರಿ ಉದ್ಘಾಟನೆ ನಂತರ ಪ್ರತಿ ಮನೆ ಮನೆಗೂ ತೆರಳಿ ಚುನಾವಣಾ ಪ್ರಚಾರ ನಡೆಸಿದರು. ಇದೊಂದು ಬಾರಿ ಚುನಾವಣೆಯಲ್ಲಿ ತಮ್ಮನ್ನು ಬೆಂಬಲಿಸಿ. ಅವಕಾಶ ಕೊಡಿ. ಖಂಡಿತ ಈ ಕ್ಷೇತ್ರದಲ್ಲಿ ಬದಲಾವಣೆ ತರುತ್ತೇನೆ. ನಾವೆಲ್ಲರೂ ಸೇರಿ ಕ್ಷೇತ್ರದಲ್ಲಿ ಹೊಸ ಬದಲಾವಣೆ ತರಬೆಕಿದೆ ಎಂದರು.

ದರ್ಗಾಮೌಲಾದ ಅನೇಕ ಅಲ್ಪಸಂಖ್ಯಾತ ಮುಖಂಡರು, ಮಹಿಳೆಯರು ಮತ್ತು ಯುವಕರು ನವೀನ್ ಕಿರಣ್ ಪರವಾಗಿ ಬೆಂಬಲವಾಗಿ ಮತಯಾಚನೆ ಮಾಡಿದರು.

 

 

Follow us on Social Media