ಭ್ರಷ್ಟಾಚಾರ ಮುಕ್ತ, ಜನಸ್ನೇಹಿ ಆಡಳಿತವೇ ರಾಮರಾಜ್ಯ – ಕೆ. ವಿ. ನವೀನ್ ಕಿರಣ್

SHARE THIS!

ಎಲ್ಲ ನನ್ನ ಅತ್ಮೀಯರಿಗೂ,

ಮರ್ಯಾದಾ ಪುರುಷೋತ್ತಮ ರಾಮರಾಜ್ಯ ಸಾಮ್ರಾಟ  ಶ್ರೀರಾಮನ ಜನ್ಮ ದಿನ, ಶ್ರೀರಾಮ ನವಮಿ ಹಬ್ಬದ ಶುಭಾಶಯಗಳು.

ಆತ್ಮೀಯರೆ,

ಇಡೀ ಜಗತ್ತಿಗೆ ಮಾದರಿ, ಹಾಗೂ ಭ್ರಷ್ಟಾಚಾರ ಮುಕ್ತ ಜನಸ್ನೇಹಿ ಆಡಳಿತವನ್ನು ನಡೆಸಿ, ಉತ್ತಮ ರಾಜ್ಯದ ಪರಿಕಲ್ಪನೆಯನ್ನು ಪ್ರಪಂಚಕ್ಕೆ ಪರಿಚಯಿಸಿದ್ದು ಶ್ರೀ ರಾಮ.

ಅಂದು ಶ್ರೀರಾಮ ನೀಡಿದ ಜನಸ್ನೇಹಿ ಆಡಳಿತವೇ ರಾಮರಾಜ್ಯ. ಇಡೀ ಮನುಕುಲವೇ ಪೂಜಿಸಿ, ಆರಾಧಿಸುವ ಮಹಾನ್ ಸಾಮ್ರಾಟ ಶ್ರೀರಾಮ. ರಾವಣನಂತ ಮಹಾನ್ ವಿರೋಧಿಗಳು ಎದುರಾದರೂ ಸಹ ಕೊನೆಗೂ ಜಯ ಸಿಕ್ಕಿದ್ದು ಶ್ರೀರಾಮನಿಗೆ. ಅಂತಹ ಮರ್ಯಾದಾ ಪುರುಷೋತ್ತಮ ಶ್ರೀರಾಮ ಜನಸಿದ ಪವಿತ್ರ ದಿನವೇ ಈ ಶ್ರೀರಾಮ ನವಮಿ ಆಚರಣೆ. ಭರತಖಂಡದಲ್ಲಿ ಮಾತ್ರವಲ್ಲದೆ ‘ರಾಮನಾಮ’ ಜಗತ್ತಿನ ಬೇರೆ ಬೇರೆ ದೇಶಗಳಲ್ಲೂ ಝೇಂಕರಿಸುತ್ತದೆ.ಅದಕ್ಕೆ ಕಾರಣ ರಾಮ ನೀಡಿದ ಭ್ರಷ್ಟಾಚಾರ ಮುಕ್ತ ಮತ್ತು ಜನಸ್ನೇಹಿ ಆಡಳಿತ. ಇವತ್ತು ಅಂತಹ ಆಡಳಿತದ ಅವಶ್ಯಕತೆ ನಮ್ಮ ಚಿಕ್ಕಬಳ್ಳಾಪುರಕ್ಕೆ ಇದೆ. ನನ್ನ ಕನಸು ಮತ್ತು ಗುರಿ ಕೂಡ ಅದೇ.

ಬನ್ನಿ ಎಲ್ಲರೂ ಸೇರಿ ಭ್ರಷ್ಟಾಚಾರ ಮುಕ್ತ ಹಾಗೂ ಜನಸ್ನೇಹಿ ಆಡಳಿತದ ರಾಮರಾಜ್ಯ ಕಟ್ಟೋಣ.

 

ಇಂತಿ ನಿಮ್ಮ

ಕೆ. ವಿ. ನವೀನ್ ಕಿರಣ್

ಸಮಾಜ ಸೇವಕರು

ವಿಧಾನಸಭಾ ಕ್ಷೇತ್ರ, ಚಿಕ್ಕಬಳ್ಳಾಪುರ.

 

Follow us on Social Media