ನಾನು ಚಿಕ್ಕಬಳ್ಳಾಪುರ ಕ್ಷೇತ್ರದ ಜನತೆ ಬೆಳೆಸಿದ ಮಗ ಹೊರಗಿನಿಂದ ಬಂದವನಲ್ಲ – ಕೆ. ವಿ. ನವೀನ್ ಕಿರಣ್ 

SHARE THIS!

ಚಿಕ್ಕಬಳ್ಳಾಪುರ /ನುಗತಹಳ್ಳಿ:  ಯಾರು ಹೊರಗಿನವರು, ಯಾರು ಅಲ್ಲ ಎಂಬುದನ್ನು ಜನತೆಗೆ ಗೊತ್ತಿರುವ ವಿಚಾರ. ನಾನು ಇದೇ ಮಣ್ಣಿನಲ್ಲಿ ಹುಟ್ಟಿ ಬೆಳೆದದ್ದು. ಚಿಕ್ಕಬಳ್ಳಾಪುರ ಕ್ಷೇತ್ರದ ಜನತೆ ಬೆಳೆಸಿದ ಮಗ, ಹೊರಗಿನಿಂದ ಬಂದವನಲ್ಲ ಎಂದು ಸಮಾಜ ಸೇವಕ ಕೆ. ವಿ. ನವೀನ್ ಕಿರಣ್ ಹೇಳಿದರು.

ನುಗತಹಳ್ಳಿ ಗ್ರಾಮದಲ್ಲಿ ನಡೆದ ಬೇರೆ ಬೇರೆ ಪಕ್ಷದ ಕಾರ್ಯಕರ್ತರೆಲ್ಲ ನವೀನ್ ಕಿರಣ್ ಬಣಕ್ಕೆ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಮುಖಂಡ ನುಗತಹಳ್ಳಿ ರವಿ ಅವರ ನೇತೃತ್ವದಲ್ಲಿ ನಲಮಕಾನ ಹಳ್ಳಿ ಮತ್ತು ಕೇಶವಾರದ ಸುಮಾರು 40 ಕ್ಕೂ ಹೆಚ್ಚು ಕಾರ್ಯಕರ್ತರು ಇಂದು ನವೀನ್ ಕಿರಣ್ ಬಣವನ್ನು ಸೇರಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಕೆ. ವಿ. ನವೀನ್ ಕಿರಣ್.ಇಂದು ಅನೇಕರು ನನ್ನನ್ನು ಜಾತಿವಾದಿ ಎಂದು ಬಿಂಬಿಸಲು  ಯತ್ನಿಸುತ್ತಿದ್ದಾರೆ. ಆದರೆ ನಾನು ಜಾತಿ, ಧರ್ಮ ಎಲ್ಲವನ್ನೂ ಮೀರಿ ನಿಂತಿದ್ದೇನೆ ಎಂದು ಹೇಳಿದರು. ನಂತರ ಮಾತನಾಡಿದ ಮುಖಂಡ ನುಗತಹಳ್ಳಿ ರವಿ , ನವೀನ್ ಕಿರಣ್ ಅವರು ಜಾತಿಗೆ ಸೀಮಿತವಾಗಿಲ್ಲ ಅವರೊಂದಿಗೆ ನಮ್ಮ ಹಾಗೇ ದಬ್ಬಾಳಿಕೆಗೆ ಒಳಗಾದ ಒಕ್ಕಲಿಗ, ಲಿಂಗಾಯತ, ಕುರುಬ, ದಲಿತ ಹಾಗೂ ಅಲ್ಪಸಂಖ್ಯಾತರು ಸೇರಿದಂತೆ ಸಾವಿರಾರು ಜನರು ನವೀನ್ ಕಿರಣ್ ಜೊತೆ ಇದ್ದಾರೆ. ಅವರು ಶಾಸಕರಾಗಲು ರಾಜಕೀಯಕ್ಕೆ ಬಂದಿಲ್ಲ ಬದಲಿಗೆ ಸೇವಕರಾಗಲು ಬಂದಿದ್ದಾರೆ ಎಂದರು.

 

 

Follow us on Social Media