ಜಲ ಸಂರಕ್ಷಣೆ ಮಾಡಿದರೆ, ಜೀವ ಸಂರಕ್ಷಣೆ ಮಾಡಿದ ಹಾಗೆ – ಕೆ. ವಿ. ನವೀನ್ ಕಿರಣ್

SHARE THIS!

ಆತ್ಮೀಯರೆ,

ಇಂದು ವಿಶ್ವ ಜಲ ದಿನ , ಇಡೀ ಜೀವ ಪ್ರಪಂಚಕ್ಕೆ ಮುಖ್ಯವಾಗಿ ಬೇಕಾದದ್ದು ನೀರು.

ಈ ನೀರು ಎಂಬ ವಸ್ತು ಭೂಮಿಯ ಮೇಲೆ ಇರದಿದ್ದರೆ ಜೀವ ಜಗತ್ತು ಜೀವಿಸಲು ಸಾಧ್ಯವಿರುತ್ತಿರಲಿಲ್ಲ. ಭೂಮಿಯ ಮುಕ್ಕಾಲು ಭಾಗ ನೀರಿನಿಂದ ಆವರಿಸಿದರೂ ಸಹ ಈಗ ಜಗತ್ತಿನಾದ್ಯಂತ ನೀರಿನ ಸಮಸ್ಯೆಯನ್ನು ಎದುರಿಸಬೇಕಾಗಿದೆ.

ನಮ್ಮ ಚಿಕ್ಕಬಳ್ಳಾಪುರ ಕ್ಷೇತ್ರವೂ ಸಹ ನೀರಿನ ಸಮಸ್ಯೆ ಎದುರಿಸುತ್ತಿದೆ. ಇವತ್ತು ನಮಗೆ ಶುದ್ಧ ಕುಡಿಯುವ ನೀರು ಸಿಗುತ್ತಿಲ್ಲ. ಇದಕ್ಕೆ ಮುಖ್ಯ ಕಾರಣ ಮಾನವನು ತನ್ನ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಜಲ ಸಂಪನ್ಮೂಲಗಳನ್ನು ಮತ್ತು ಪರಿಸರವನ್ನು ನಾಶ ಮಾಡುತ್ತಿದ್ದಾನೆ. ಪ್ರತಿಯೊಬ್ಬರೂ ಜೀವ ಜಲವನ್ನು ಉಳಿಸಲು ಮುಂದಾಗಬೇಕಿದೆ.

ಜಲ ಸಂರಕ್ಷಣೆ, ಜೀವ ಸಂರಕ್ಷಣೆ ಎನ್ನುವುದನ್ನು ಮರೆಯಬಾರದು.

ಹನಿ ಹನಿ ನೀರಿಗೂ ತುಂಬಾ ಮಹತ್ವವಿದೆ.

ಬನ್ನಿ ಜೀವ ಜಲ ಸಂರಕ್ಷಣೆಯಲ್ಲಿ ಭಾಗಿಯಾಗಿ

 

ಇಂತಿ ನಿಮ್ಮ

ಕೆ.ವಿ. ನವೀನ್ ಕಿರಣ್

ಸಮಾಜ ಸೇವಕರು ವಿಧಾನ ಸಭಾ ಕ್ಷೇತ್ರ ಚಿಕ್ಕಬಳ್ಳಾಪುರ .

Follow us on Social Media