ಬದಲಾವಣೆಯ ಹೋರಾಟಕ್ಕೆ ಹೊನ್ನೇನಹಳ್ಳಿ ಜನರು ಜೊತೆಯಾಗ ಬೇಕು – ಕೆ. ವಿ. ನವೀನ್ ಕಿರಣ್

SHARE THIS!

ಚಿಕ್ಕಬಳ್ಳಾಪುರ/ ಹೊನ್ನೇನಹಳ್ಳಿ :  ಭ್ರಷ್ಟಾಚಾರದ ವಿರುದ್ಧದ ಹೋರಾಟಕ್ಕೆ ಇವತ್ತು ಕ್ಷೇತ್ರ ಪೂರ್ತಿ ಬೆಂಬಲ ಸಿಕ್ಕಿದೆ. ಈ ಬದಲಾವಣೆಯ ಹೋರಾಟಕ್ಕೆ ಹೊನ್ನೇನಹಳ್ಳಿ ಜನತೆಯೂ ಸಹ ಜೊತೆಯಾಗ ಬೇಕು ಎಂದು ಸಮಾಜ ಸೇವಕ ಕೆ.ವಿ. ನವೀನ್ ಕಿರಣ್ ಕರೆ ನೀಡಿದರು.

ಹೊನ್ನೇನಹಳ್ಳಿ ಗ್ರಾಮದಲ್ಲಿ ತಮ್ಮ ಚುನಾವಣಾ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದ ಅವರು ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಭ್ರಷ್ಟಾಚಾರ ಅನ್ನೋದು ಎಲ್ಲೆಡೆ ಬೇರೂರಿದೆ. ಅದನ್ನು ನಾವು ಬೇರು ಸಮೇತ ಕಿತ್ತು ಹಾಕಬೇಕಿದೆ. ಅದಕ್ಕೆ ಪ್ರತಿಯೊಬ್ಬ ವ್ಯಕ್ತಿಯೂ ಸಹ ಬದಲಾವಣೆಯಲ್ಲಿ ಭಾಗಿಯಾಗಬೇಕು ಎಂದರು. 

ಎಲ್ಲೆಡೆ ಚಿಕ್ಕಬಳ್ಳಾಪುರವನ್ನು ಸಂಪೂರ್ಣ ಅಭಿವೃದ್ದಿ ಮಾಡಿದ್ದೇನೆ ಎಂದು ಹೇಳಿಕೊಂಡು ತಿರುಗುತ್ತಾರೆ ಇವರ ಅಭಿವೃದ್ದಿ ಕಾರ್ಯ ಎಷ್ಟು ಅನ್ನೋದನ್ನು ಪ್ರತಿಷ್ಠಿತ ಪತ್ರಿಕೆಗಳಲ್ಲಿನ ವರದಿಗಳನ್ನು ಒಮ್ಮೆ ನೋಡಿ ಅವರ ಕಾರ್ಯವೈಖರಿ ತಿಳಿಯುತ್ತೆ ಕ್ಷೇತ್ರದ ಅಭಿವೃದ್ದಿ ಬದಲಿಗೆ ತಮ್ಮ ಹಾಗೂ ತಮ್ಮ ಬೆಂಬಲಿಗರ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದ್ದಾರೆ ಎಂದು ಹೇಳಿದರು.

ಗ್ರಾಮಸ್ಥರ ಜೊತೆ ಮುಂದಿನ ದಿನಗಳಲ್ಲಿ ಆಗಬೇಕಾದ ಬದಲಾವಣೆ ಹಾಗೂ ಅಭಿವೃದ್ದಿ ಕಾರ್ಯಗಳ ಬಗ್ಗೆ ಚರ್ಚೆ ನಡೆಸಿದರು. ಸಭೆಯಲ್ಲಿ ಭಾಗಿಯಾಗಿದ್ದ ಮಹಿಳೆಯರು ಮಾತನಾಡಿ ನಮಗೆ ಯಾವುದೇ ರೀತಿಯ ಸೀರೆ, ಮಿಕ್ಸಿ ಬೇಡ. ನಮಗೆ ಮೂಲ ಸೌಕರ್ಯ ಕೊಡಿ ಸಾಕು ಎಂದರು. ನೂರಾರು ಸಂಖ್ಯೆಯಲ್ಲಿ ಸೇರಿದ್ದ ಗ್ರಾಮಸ್ಥರು ಈ ಬಾರಿ ತಮ್ಮ ಸಂಪೂರ್ಣ ಬೆಂಬಲ ನವೀನ್ ಕಿರಣ್ ಅವರಿಗೆ ನೀಡುವುದಾಗಿ ಘೋಷಣೆ ಕೂಗಿದರು.

Download KVNK APP

 

Follow us on Social Media