ಕೆ ವಿ ನವೀನ ಕಿರಣ್ ಅವರ ಬೆಂಬಲವಾಗಿ ಸಾವಿರಾರು ಸಂಖ್ಯೆಯಲ್ಲಿ ಮುಸಲ್ಮಾನ ಬಾಂದವರು

SHARE THIS!

ನೆನ್ನೆ ಚಿಕ್ಕಬಳ್ಳಾಪುರದ ದರ್ಗಾದಲ್ಲಿ ಕೆ ವಿ ನವೀನ ಕಿರಣ್ ಅವರ ಬೆಂಬಲವಾಗಿ ಸಾವಿರಾರು ಸಂಖ್ಯೆಯಲ್ಲಿ ಮುಸಲ್ಮಾನ ಬಾಂದವರು ಸೇರಿದ್ದರು, ಕೆ ವಿ ನವೀನ ಕಿರಣ್ ರವರನ್ನು ಆದರದಿಂದ ಸ್ವಾಗತಿಸಿದರು. ಪ್ರಾರ್ಥನೆ ಬಳಿಕ ನವೀನ ಕಿರಣ್ ರವರು ನೆರೆದಿದ್ದ ಎಲ್ಲ ಮುಸಲ್ಮಾನ ಬಾಂದವರ ಜೊತೆ ಚರ್ಚೆ ನಡೆಸಿದರು. ಕೆಲ ದಿನಗಳ ಹಿಂದೆ ಘಟಿಸಿದ ದುರ್ಘಟನೆಯಲ್ಲಿ ತನ್ನ ಪ್ರಾಣಕ್ಕೆ ಅಪಾಯ ಬಂದಂತ ಪರಿಸ್ಥಿತಿಯಲ್ಲಿ ನನಗೆ ಹೆಚ್ಚಿನ ಅಪಾಯವಾಗಬಾರದೆಂದು ದೇವರಲ್ಲಿ ಪ್ರಾರ್ಥಿಸಿದವರಲ್ಲಿ ನೀವೇ ಮೊದಲಿಗರು. ಅಪಘಾತ ಸಂಭವಿಸಿದ ಕ್ಷಣದಲ್ಲಿ ದರ್ಗಾ ಒಂದರಲ್ಲಿ ಮೊದಲು ಪ್ರಾರ್ಥಿಸಿದ್ದೆ ನೀವುಗಳಿರು ನಿಮಗೆ ನಾನು ಯಾವಾಗಲು ಚಿರಋಣಿ.

ನಿಮ್ಮ, ನಮ್ಮ ಬಾಂದವ್ಯ ಬಹಳ ಹಿಂದಿನಿಂದ ಬೆಳದು ಬಂದಿದೆ. ಅದು ಸಿ ವಿ ವಿ ಅವರ ಕಾಲದಿಂದಲೂ ಬೆಳದು ಬಂದಿರುವ ಬಾಂಧವ್ಯಗಳು ಚಿರಕಾಲ ಉಳಿಯಲಿದೆ. ನಿಮ್ಮ ಮೇಲಿನ ಪ್ರೀತಿ ಹಾಗು ನೀವು ನನ್ನ ಮೇಲಿಟ್ಟಿರುವ ಗೌರವ ಅಭಿಮಾನಕ್ಕೆ ತಲೆಬಾಗಿಸುತ್ತೆನೆ.

ಸಿ ವಿ ವಿ ಅವರ ಕಾಲದಿಂದಲೂ ತಾವು ತೋರುತ್ತಿರುವ ಪ್ರೀತಿ ಹಾಗು ಆಶೀರ್ವಾದವನ್ನು ಮುಂದುವರಿಸಿ ಈ ಬಾರಿ ನನ್ನ ಜಯಶೀಲರನ್ನಾಗಿ ಮಾಡಿ. ನೀವು ಮೊದಲು ನನ್ನ ಬೆಂಬಲಕ್ಕೆ ನಿಂತರೆ ಬೇರೆ ಎಲ್ಲರೂ ಬೆಂಬಲಕ್ಕೆ ನಿಲ್ಲುತ್ತಾರೆ. ಚುನಾವಣೆ ಗೆದ್ದು ಬಂದಮೇಲೆ ನನ್ನ ಮೊದಲ ಆದ್ಯತೆ ಮೂಲ ಸೌಲಭ್ಯ, ಹಸಿದವರಿಗೆ ಊಟ, ವಸತಿ ಇಲ್ಲದವರಿಗೆ ವಸತಿ ಹಾಗು ನಿರುದ್ಯೋಗಿಗಳಿಗೆ ಉದ್ಯೋಗ ಸೃಷ್ಟಿಯಾಗಿರುತ್ತದೆ.

ಪ್ರತಿಸ್ಪರ್ದಿಗಳು ನಮ್ಮ ಬಗ್ಗೆ ಇಲ್ಲಸಲ್ಲದ ಅಪಪ್ರಚಾರ ಮಾಡುತ್ತಿದ್ದು, ಇದಕ್ಕೆ ಯಾರು ಮಾರುಹೋಗಬಾರದು. ನಾವೆಲ್ಲ ಒಗ್ಗಟಾಗಿ ಕೆಲಸ ಮಾಡುವ ಮೂಲಕ ಮುಂದಿನ ಚುನಾವಣೆ ಎದುರಿಸಬೇಕು. ಚಿಕ್ಕಬಳ್ಳಾಪುರದ ಸರ್ವೋತೋಕ ಅಭಿವೃದ್ದಿಗಾಗಿ ನನಗೆ ಶಕ್ತಿ ತುಂಬಬೇಕೆಂದು ಕೋರಿದರು. ಇದೆ ಸಂದಭದಲ್ಲಿ ನೂರಾರು ಮುಸಲ್ಮಾನ ಬಾಂದವರು ಕೆ ವಿ ನವೀನ್ ಕಿರಣ್ ಅವರಿಗೆ ಬೆಂಬಲ ಸೂಚಿಸುತ್ತ ಅವರೊಂದಿಗೆ ಸೇರ್ಪಡೆಯಾದರು, ಕೆ ವಿ ನ್ ಕೆ ಗೆಲುವಿಗಾಗಿ ಶ್ರಮಿಸುವುದಾಗಿ ಹಾಗು ಅವರ ಗೆಲುವು ನಿಶ್ಚಯವೆಂದು ಜೈಕಾರ ಕೂಗಿದರು.

 

Download KVNK APP
Follow us on Social Media