ಹಣ ಬಲದಿಂದ ಗೆಲ್ಲಬಹುದು ಅನ್ನೋದು ಕೇವಲ ಭ್ರಮೆ, ಹಣ ಬಲಕ್ಕಿಂತ ಜನ ಬಲ ಮುಖ್ಯ – ಕೆ. ವಿ. ನವೀನ್ ಕಿರಣ್

SHARE THIS!

ಚಿಕ್ಕಬಳ್ಳಾಪುರ / ನಿಮ್ಮಾಕಲನಕುಂಟೆ : ಹಣ ಬಲದಿಂದ ಏನನ್ನಾದರೂ ಗೆಲ್ಲಬಹುದು ಅನ್ನುವ ಭ್ರಮೆಯಲ್ಲಿ ಕೆಲವರು ಇದ್ದರೆ, ಅದರೆ ಅದು ಎಂದಿಗೂ ಸಾಧ್ಯವಿಲ್ಲ. ಹಣ ಬಲಕ್ಕಿಂತ, ಜನ ಬಲ ಮುಖ್ಯ ಎಂದು ಸಮಾಜ ಸೇವಕ ಕೆ.ವಿ. ನವೀನ್ ಕಿರಣ್ ಹೇಳಿದರು.

ನಗರದ 7 ನೇ ವಾರ್ಡ್ ನಿಮ್ಮಾಕಲನಕುಂಟೆ ನಲ್ಲಿ ನಡೆದ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ದುಡ್ಡಿನಿಂದ ಎಲ್ಲರನ್ನೂ ಖರೀದಿ ಮಾಡುವ ಹುಚ್ಚು ಸಾಹಸಕ್ಕೆ ಕೈ ಹಾಕಿದ್ದಾರೆ. ಇಂದು ಜನರು ಜಾಗೃತರಾಗಿದ್ದಾರೆ, ಖಂಡಿತ ಈ ಬಾರಿ ಬದಲಾವಣೆಗೆ ಜನರು ಮನ್ನಣೆ ನೀಡುತ್ತಾರೆ ಎಂದರು. 

ಮೊದಲು ತೆರೆದ ವಾಹನದಲ್ಲಿ ಮೆರವಣಿಗೆ  ಮೂಲಕ ತಮ್ಮ ನಾಯಕನಿಗೆ ಅದ್ದೂರಿ ಸ್ವಾಗತ ಕೋರಿದ ಜನರು ತಮ್ಮ ಸಂಪೂರ್ಣ ಬೆಂಬಲ ನೀಡುವುದಾಗಿ ಘೋಷಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಅನೇಕ ಮುಖಂಡರು ಇವತ್ತು ಒಂದು ಸಣ್ಣ ಖಾತೆ ತೆರೆಯಲು ನಾವು ಶಾಸಕರ ಮನೆಯ ಕದ ತಟ್ಟ ಬೇಕು. ತಮಗೆ ಬೇಕಾದವರಿಗೆ ಮಾತ್ರ ಖಾತೆ, ಇಲ್ಲವಾದಲ್ಲಿ ಒಂದು ಸಣ್ಣ ಕೆಲಸವೂ ಸಹ ಆಗುವುದಿಲ್ಲ. ಈ ಸರ್ವಾಧಿಕಾರಿ ಧೋರಣೆಯಿಂದ ನಮಗೆ ಮುಕ್ತಿ ಬೇಕಾಗಿದೆ ಎಂದರು.

ಅದೇ ಕಾರ್ಯಕ್ರಮದಲ್ಲಿ ಮಾತನಾಡಿದ ಮಹಿಳೆಯರು ನಮಗೆ ಯಾವ ಸೀರೆ, ಮೀಕ್ಷೀ ಬೇಡ ನಮ್ಮ ವಾರ್ಡ್ಗೆ ಮೂಲ ಸೌಕರ್ಯ ಕೊಡಿ ಸಾಕು ಎಂದರು.

ಜನರ ಕುಂದು ಕೊರತೆ ಆಲಿಸಿದ ನಂತರ ಮತ್ತೇ ಮಾತನಾಡಿದ ಸಮಾಜ ಸೇವಕ ಕೆ. ವಿ. ನವೀನ್ ಕಿರಣ್ ಈ ಸಮಸ್ಯೆಗಳು ನಿಮ್ಮ ಒಂದು ವಾರ್ಡ್ ಸಮಸ್ಯೆ ಅಲ್ಲ. ಇದು ಇಡೀ ಚಿಕ್ಕಬಳ್ಳಾಪುರ ಕ್ಷೇತ್ರದ ಸಮಸ್ಯೆ. ಈ ಬಾರಿ ನೀವೆಲ್ಲರೂ ಒಂದಾಗಿ ನನ್ನನ್ನು ಬೆಂಬಲಿಸಿದ್ದೇ ಆದಲ್ಲಿ ಖಂಡಿತ ಅಭಿವೃದ್ದಿ ಮಾಡುತ್ತೇನೆ, ಎಲ್ಲರೂ ಸೇರಿಹೊಸ ಬದಲಾವಣೆ ತರೋಣ ಎಂದರು.

 

 

Follow us on Social Media