ಗೆದ್ದು ಬಂದ ಮೂರು ತಿಂಗಳ ಅವಧಿಯಲ್ಲಿ ಗ್ರಾಮಗಳಿಗೆ ಸಂಪೂರ್ಣ ಮೂಲಸೌಕರ್ಯ ವ್ಯವಸ್ಥೆ – ಕೆ. ವಿ. ನವೀನ್ ಕಿರಣ್ 

SHARE THIS!

 

ಕೇತೇನಹಳ್ಳಿ :  ಕ್ಷೇತ್ರದಲ್ಲಿನ ಗ್ರಾಮಗಳ ಅಭಿವೃದ್ಧಿಯೇ ನನ್ನ ಗುರಿ, ಗೆದ್ದು ಬಂದ ಮೂರು ತಿಂಗಳ ಒಳಗೆ ಎಲ್ಲ ಗ್ರಾಮಗಳಿಗೂ ಮೂಲ ಸೌಕರ್ಯ ಒದಗಿಸುತ್ತೇನೆ ಎಂದು ಸಮಾಜ ಸೇವಕ ಕೆ.ವಿ. ನವೀನ್ ಕಿರಣ್ ತಿಳಿಸಿದರು.

ಕೇತೇನಹಳ್ಳಿಯಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡಿದ ಅವರು ಪ್ರತಿ ಹಳ್ಳಿಗೂ ಮೂಲ ಸೌಕರ್ಯ ಸಿಗಬೇಕು. ನನ್ನ ಮೊದಲ ಆಧ್ಯತೆ  ಗ್ರಾಮಗಳ ಸಂಪೂರ್ಣ ಅಭಿವೃದ್ದಿ ಮಾಡುವುದು ಎಂದು ಹೇಳಿದರು. ಗ್ರಾಮಸ್ಥರ ಕುಂದು ಕೊರತೆ ಆಲಿಸಿದ ಅವರು ಚುನಾವಣೆಯ ನಂತರ ಎಲ್ಲ ರೀತಿಯ ಅಭಿವೃದ್ಧಿ ಕಾರ್ಯ ಮಾಡುವುದಾಗಿ ತಿಳಿಸಿದರು. ನಂತರ ಮಾತನಾಡಿದ ಗ್ರಾಮದ ಮುಖಂಡರು ನಮ್ಮ ಗ್ರಾಮಕ್ಕೆ ನೀರು, ಆಸ್ಪತ್ರೆ ಅವಶ್ಯಕತೆ ಇದೆ ಅದನ್ನು ಒದಗಿಸಿ ಕೊಡಿ ಎಂದರು. ಈ ಬಾರಿ ನಾವೂ ಸಹ ಬದಲಾವಣೆ ಬಯಸಿದ್ದು ಗ್ರಾಮದ ಸಂಪೂರ್ಣ ಬೆಂಬಲ ನೀಡುವುದಾಗಿ ತಿಳಿಸಿದರು.

 

 

 

Follow us on Social Media