ಚುನಾವಣೆಯಲ್ಲಿ ಕೆ.ವಿ. ನವೀನ್ ಕಿರಣ್ ಅವರ ಬೆಂಬಲಕ್ಕೆ ಸಮಾಜವಾದಿ ಪಕ್ಷ ಬೆಂಬಲಿಸುತ್ತದೆ – ರಾಜ್ಯಾಧ್ಯಕ್ಷ ರಾಬಿನ್ ಮ್ಯಾಥುಸ್ ಘೋಷಣೆ.

SHARE THIS!

ಚಿಕ್ಕಬಳ್ಳಾಪುರ : ಆದರ್ಶ ವ್ಯಕ್ತಿತ್ವವುಳ್ಳ ಜನನಾಯಕರು ಇವತ್ತು ಬೇಕಾಗಿದ್ದಾರೆ, ಅಂಥವರಲ್ಲಿ ಚಿಕ್ಕಬಳ್ಳಾಪುರದ ಕೆ.ವಿ. ನವೀನ್ ಕಿರಣ್ ಕೂಡಾ ಒಬ್ಬರು ಎಂದು ಸಮಾಜವಾದಿ ಪಕ್ಷದ 

ರಾಜ್ಯಾಧ್ಯಕ್ಷರಾದ ರಾಬಿನ್ ಮ್ಯಾಥುಸ್ ಹೇಳಿದರು. ಸಿ.ವಿ.ವಿ ಕ್ಯಾಂಪಸ್ ನಲ್ಲಿ ಸಮಾಜ ಸೇವಕ ಕೆ.ವಿ. ನವೀನ್ ಕಿರಣ್ ಅವರನ್ನು ಭೇಟಿ ಮಾಡಿ ಮಾತನಾಡಿದ ಅವರು

ನವೀನ್ ಕಿರಣ್ ಅವರು ಮಾಡಿರುವ ಸಾಮಾಜಿಕ ಹಾಗೂ ಜನಪರ ಕಾರ್ಯಕ್ರಮಗಳು  ನಿಜಕ್ಕೂ ಶ್ಲಾಘನೀಯ. ಇಂಥಹ ಸರಳ ವ್ಯಕ್ತಿತ್ವದ ನಾಯಕರು ರಾಜಕೀಯಕ್ಕೆ ಬರಬೇಕು. ಇವರ ಸಮಾಜಿಕ ಕಾಳಜಿ, ಬದ್ಧತೆ ಮೆಚ್ಚುವಂತದ್ದು.

ನವೀನ್ ಕಿರಣ್ ಅವರ ಕಾರ್ಯಗಳನ್ನು ಮೆಚ್ಚಿ ಈ ಬಾರಿಯ ಚುನಾವಣೆಯಲ್ಲಿ ಅವರನ್ನು ಸಂಪೂರ್ಣವಾಗಿ ನಾವೂ ಹಾಗೂ ನಮ್ಮ ಪಕ್ಷದ ವತಿಯಿಂದ ಅವರನ್ನು ಬೆಂಬಲಿಸುತ್ತೇವೆ ಎಂದು ಹೇಳಿದರು.

 

 

Follow us on Social Media