ಚಿಕ್ಕಬಳ್ಳಾಪುರ ಕ್ಷೇತ್ರವನ್ನು ಉಳಿಸಿಕೊಳ್ಳಬೇಕಾದರೆ ಟಿಕೇಟ್ ವಿಚಾರದಲ್ಲಿ ಕಾಂಗ್ರೆಸ್ ಹೈಕಮಾಂಡ್ ಜನಾಭಿಪ್ರಾಯ ಸಂಗ್ರಹಿಸಿ ಸರಿಯಾದ ನಿರ್ಧಾರ ಕೈಗೊಳ್ಳಬೇಕು – ಕೆ.ವಿ. ನವೀನ್ ಕಿರಣ್ ಮನವಿ

SHARE THIS!

ಚಿಕ್ಕಬಳ್ಳಾಪುರ/ಪೆರೆಸಂದ್ರ : ಚಿಕ್ಕಬಳ್ಳಾಪುರ ಕ್ಷೇತ್ರವನ್ನು ಕಾಂಗ್ರಸ್ ಪಕ್ಷ ಉಳಿಸಿಕೊಳ್ಳಬೇಕಾದರೆ ಟಿಕೆಟ್ ವಿಚಾರದಲ್ಲಿ ಜನಾಭಿಪ್ರಾಯ ಸಂಗ್ರಹಿಸಿ ಸರಿಯಾದ ನಿರ್ಧಾರ ಕೈಗೊಳ್ಳಬೇಕು ಎಂದು ಕಾಂಗ್ರಸ್ ಮುಖಂಡ ಹಾಗೂ ಟಿಕೆಟ್‍ನ ಪ್ರಭಲ ಆಕಾಂಕ್ಷಿಯಾಗಿರುವ ಕೆ.ವಿ. ನವೀನ್ ಕಿರಣ್ ಹೇಳಿದರು.  

ಶಾಸಕ ಡಾ. ಕೆ. ಸುಧಾಕರ್ ಅವರ ಸ್ವಕ್ಷೇತ್ರ ಪೆರೆಸಂದ್ರದಲ್ಲಿ ತಮ್ಮ ಮೊದಲ ರಾಜಕೀಯ ಬೃಹತ್ ಸಮಾವೇಶ ಮಾಡುವ ಮೂಲಕ ಚುನಾವಣಾ ರಣಕಹಳೆ ಮೊಳಗಿಸಿದ ನವೀನ್ ಕಿರಣ್ ಚಿಕ್ಕಬಳ್ಳಾಪುರದ ರಜಕೀಯ ಇತಿಹಾಸದಲ್ಲಿ ಹೊಸ ಸಂಚಲನ ಉಂಟು ಮಾಡಿರುವ ಅವರು ತಮ್ಮ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. 

ನಮ್ಮ ಶಾಸಕರು ಕ್ಷೇತ್ರದ ಅಭಿವೃದ್ಧಿಗಿಂತ ತಮ್ಮ ಅಭಿವೃದ್ಧಿಗೆ ಹೆಚ್ಚು ಆಸಕ್ತಿ ನೀಡಿದ್ದಾರೆ. ಅಧೀಕಾರದ ದುರಹಂಕಾರದಲ್ಲಿ ಈ ಭಾಗದ ಜನರಿಗೆ ಕೊಡಬಾರದಷ್ಟು ಕಿರುಕುಳ ನೀಡಿದ್ದಾರೆ. ಕ್ಷೇತ್ರದಲ್ಲಿ ಸರಿಯಾದ ರೀತಿಯಲ್ಲಿ ಒಂದೇ ಒಂದು ಅಭಿವೃದ್ಧಿ ಕೆಲಸಗಳು ನಡೆದಿಲ್ಲ. ರಾಜ್ಯ ಹಾಗೂ ರಾಷ್ಟ್ರಮಟ್ಟದ ಪ್ರತಿಷ್ಠಿತ ಮಾಧ್ಯಮಗಳು ನಡೆಸಿದ ಸಮೀಕ್ಷೆಯಲ್ಲಿ ಶಾಸಕರ ಸಾಧನೆ ಬಯಲಾಗಿದೆ. 124 ಕ್ಷೇತ್ರಗಳಲ್ಲಿ ನಮ್ಮ ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕರು 123 ನೇ ಸ್ಥಾನ ಪಡೆದಿದ್ದಾರೆ. ಇಲ್ಲಿಗೆ ನಮ್ಮ ಶಾಸಕರ ಅಭಿವೃದ್ಧಿ ಕಾರ್ಯ ಏನೂ ಎಂಬುದು  ಕ್ಷೇತ್ರದ  ಜನತೆಗೆ ಗೊತ್ತಾಗಿ. ಶಾಸಕರು ಯಾವುದೇ ಆಮೀಷ ಒಡ್ಡಿದರೂ ಜನ ಅವರಿಗೆ ಈ ಬಾರಿ ತಕ್ಕ ಪಠ ಕಲಿಸುತ್ತಾರೆ ಎಂದರು. 

ಸುಮಾರು 3 ಕೀಮಿ ದೂರದಿಂದ ಸಾವಿರಾರೂ ಕಾರ್ಯಕರ್ತರು ಬೈಕ್ ರ್ಯಾಲಿ ಮೂಲಕ ವೇದಿಕೆಗೆ ಆಗಮಿಸಿದ ಕೆ.ವಿ. ನವೀನ್ ಕಿರಣ್ ಅವರಿಗೆ ಹಿರಿಯ ಮುಖಂಡರಾದ ಜಿ.ಹೆಚ್ ನಾಗರಾಜ ಸಾತ್ ನೀಡಿದರು. 

ವೇದಿಕೆಯಲ್ಲಿ ಕ್ಷೇತ್ರದ ಹಿರಿಯ ಮುಖಂಡರಾದ ಜಿ.ಹೆಚ್ ನಾಗರಾಜ, ಶಸಕರ ವಿರುದ್ಧ ಪ್ರಶ್ನೇಗಳ ಸುರಿಮಳೆ ಗೈದು ಅವರ ಕೆಂಗಣ್ಣಿಗೆ ಗುರಿಯಾಗಿರುವ ಪೆರೆಸಂದ್ರದವರೇ ಆದ ಪ್ರಾಧ್ಯಾಪಕ ಪ್ರದೀಪ್ ಈಶ್ವರ್ ಸೇರಿದಂತೆ ಅನೇಕ ಕಾಂಗ್ರಸ್‍ನ ಹಿರಿಯ ಮುಖಂಡರು, ಕಾರ್ಯಕರ್ತರು ಭಾಗಿಯಾಗಿದ್ದರು. 

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಹಿರಿಯ ಮುಖಂಡರಾದ ಜಿ.ಹೆಚ್ ನಾಗರಾಜ ಶಾಸಕ ಸುಧಾಕರ್ ಒಬ್ಬ ಮಿತ್ರದ್ರೋಹಿ ಎಂದು ನೇರವಗಿ ವಾಗ್ದಾಳಿ ನಡೆಸಿದರು. ಶಾಸಕರಿಗೆ ಅಧೀಕಾರದ ಮದ ಹೆಚ್ಚಾಗಿದ್ದೆ. ಅವರಿಗೆ ಕ್ಷೇತ್ರದ ಜನತೆ ಸರಿಯಾದ ಪಾಠ ಕಲಿಸಬೇಕು ಎಂದು ಕರೆ ನೀಡಿದರು. 

ನಂತರ ಮಾತನಾಡಿದ ಪ್ರಾಧ್ಯಾಪಕ ಪ್ರದೀಪ್ ಶಾಸಕರನ್ನು ಯಾರೂ ಸಹ ಪ್ರಶ್ನೇ ಮಾಡುವಂತಿಲ್ಲ. ಮಾಡಿದ್ದೇ ಆದಲ್ಲಿ ಅವರಿಗೆ ಬೇದರಿಕೆ ಹಾಕುತ್ತಾರೆ, ಇಲ್ಲವೆ ಕೇಸ್ ಹಾಕುತ್ತಾರೆ. ನಾನು ಅವರ ಯಾವ ಬೆದರಿಕೆಗೂ ಹೇದರುವ ವ್ಯಕ್ತಿಯಲ್ಲ. ಕ್ಷೇತ್ರದ ಜನತೆ ನನ್ನ ಜೊತೆಗಿದ್ದಾರೆ. ನನ್ನ ಹೋರಾಟ ಶಾಸಕರನ್ನು ಜೈಲಿಗೆ ಕಳುಹಿಸುವ ತನಕ ಮುಂದುವರೆಯುತ್ತದೆ ಎಂದರು. 

ಮಂಡಿಕಲ್ ಹೋಬಳಿ ಸೇರಿದಂತೆ ಕ್ಷೇತ್ರದ ಪ್ರತಿ ಹಳ್ಳಿಯಿಂದಲೂ ಜನರು ತಂಡೋಪ ತಂಡವಾಗಿ ಹರಿದು ಬಂದಿತ್ತು. ಒಟ್ಟಿನಲ್ಲಿ ನವೀನ್ ಕಿರಣ್ ಅವರು ಶಾಸಕರ ಸ್ವಕ್ಷೇತ್ರದಲ್ಲೇ ನಡೆಸಿದ ಈ ಬೃಹತ್ ಸಮಾವೇಶ ಶಾಸಕರ ನಿದ್ದೆ ಕಡಿಸಿರುವುದಂತು ನಿಜ. 

 

Follow us on Social Media