ಜನಸ್ನೇಹಿ ಆಡಳಿತಕ್ಕಾಗಿ ನನ್ನನ್ನು ಬೆಂಬಲಿಸಿ – ಬನ್ನಿಕುಪ್ಪೆಯಲ್ಲಿ ಕೆ.ವಿ. ನವೀನ್ ಕಿರಣ್

SHARE THIS!

ಚಿಕ್ಕಬಳ್ಳಾಪುರ/ಬನ್ನಿಕುಪ್ಪೆ : ಚಿಕ್ಕಬಳ್ಳಾಪುರದ ಜನತೆ ಭ್ರಷ್ಟಾಚಾರ ಮತ್ತು ದಬ್ಬಾಳಿಕೆಯಿಂದ ರೋಸಿ ಹೋಗಿದ್ದು, ಜನಸ್ನೇಹಿ ಮತ್ತು ಭ್ರಷ್ಟಾಚಾರ ರಹಿತ ಆಡಳಿತಕ್ಕಾಗಿ ಈ ಬಾರಿಯ ಚುನಾವಣೆಯಲ್ಲಿ ನನ್ನನು ಬೆಂಬಲಿಸಿ ಎಂದು ಸಮಾಜ ಸೇವಕ ಕೆ.ವಿ. ನವೀನ್ ಕಿರಣ್ ಹೇಳಿದರು.

ಬನ್ನಿಕುಪ್ಪೆ ಗ್ರಾಮದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು ಚಿಕ್ಕಬಳ್ಳಾಪುರದಲ್ಲಿ ಸರ್ವಾಧಿಕಾರದ ಆಡಳಿತ ಹೆಚ್ಚಾಗಿದ್ದು, ಜನರು ಆದರ ವಿರುದ್ಧ ಧ್ವನಿ ಎತ್ತುವ ಸಮಯ ಈಗ ಬಂದಿದೆ. ಎಲ್ಲರೂ ಒಗ್ಗಟ್ಟಾಗಿ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಬೇಕಿದೆ ಎಂದರು.

ನಂತರ ಮಾತನಾಡಿದ ಕೆ.ವಿ. ನವೀನ್ ಕಿರಣ್ ಅವರ ತಾಯಿ ಹಾಗೂ ನಗರಸಭಾ ಸದಸ್ಯೆರಾದ ಶ್ರೀಮತಿ ನಿರ್ಮಲಾ ಸಾಯಿಪ್ರಭು

ಈ ಭಾಗದ  ಜನರಿಗೆ ದಿವಂಗತ ಸಿ.ವಿ. ವೇಂಕಟರಾಯಪ್ಪ ನವರ ಕೊಡುಗೆ ಅಪಾರ. ಅವರ ಮೊಮ್ಮಗ ನನ್ನ ಮಗ ಈ ಬಾರಿ ಚುನಾವಣೆಗೆ ಸ್ಪರ್ಧಿಸುತ್ತಿದ್ದು ತಾವೆಲ್ಲರೂ ಬೆಂಬಲಿಸ ಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರು, ಮುಖಂಡರು, ಮಹಿಳೆಯರು ಹಾಗೂ ಯುವಕರು ಸೇರಿದ್ದರು.

 

 

Follow us on Social Media