ಮಹಿಳಾ ದಿನಾಚರಣೆಯೆ ಶುಭ ಕೋರುವ ಬದಲು ಅವರಿಗೆ ಸಮಾನತೆ ಹಾಗೂ ಸ್ವಾವಲಂಬನೆ ಬದುಕಿಗೆ ಅವಕಾಶ ನೀಡೋಣ. – ಕೆ.ವಿ. ನವೀನ್ ಕಿರಣ್

SHARE THIS!

ಆತ್ಮೀಯರೆ, 

ಇಂದು ಅಂತರಾಷ್ಟ್ರೀಯ ಮಹಿಳಾ ದಿನ. ಪ್ರತಿವರ್ಷ ಮಾರ್ಚ 8 ನ್ನು ಅಂತರಾಷ್ಟ್ರೀಯ ಮಹಿಳಾ ದಿನ ಎಂದು ಇಡೀ ವಿಶ್ವವೇ ಆಚರಿಸಿಕೊಂಡು ಬರುತ್ತಿದೆ. ಆದರೆ, ಆಚರಣೆಯ ಮೂಲ ಉದ್ದೇಶ, ಗುರಿಗಳು ಮಾತ್ರ ಅನುಕರಣೆ ಆಗುತ್ತಿಲ್ಲ. 

ಆಚರಣೆಯ ಒಂದು ದಿನ ಮಾತ್ರ ಮಹಿಳೆಯರಿಗೆ ಸಮಾನತೆ ಸಿಗಬೇಕು, ಅವರ ಮೇಲಿನ ದೌರ್ಜನ್ಯ ನಿಲ್ಲಬೇಕು ಎಂದು ವಿಚಾರ ಗೋಷ್ಠಿಗಳನ್ನು ನಡೆಸಿ, ಮಹಿಳೆಯರಿಗೆ ಹ್ಯಾಪಿ ವುಮೆನ್ಸ್ ಡೇ ಎಂದು ಶುಭಕೊರುವ ಬದಲು ಅವರಿಗೆ ಸಮಾನತೆ ಹಾಗೂ ಸ್ವಾವಲಂಬನೆ ಬದುಕಿಗೆ ಅವಕಾಶ ಮಾಡಿಕೊಬೇಕಾಗಿದೆ. 

ಇವತ್ತು ಮಹಿಳೆಯರು ಯಾವ ಕ್ಷೇತ್ರದಲ್ಲೂ ಹಿಂದೆ ಇಲ್ಲ. ಪ್ರತಿಯೊಬ್ಬ ಪುರುಷನಿಗೆ ಸಮಾನವಾಗಿ ಬದುಕುತ್ತಿದ್ದಾರೆ. ಇಂದು ಭಾರತೀಯ ಮಹಿಳಾ ಮಣಿಗಳು ಮಾಡಿರುವ ಸಾಧನೆ ಜಗತ್ತೇ ಹುಬ್ಬೇರಿಸುವಂತದ್ದು. ಸೈನ್ಯದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾದ ನಾರಿ, ಇಂದು ಯುದ್ಧ ವಿಮಾನಗಳ ಸಾರಥಿಯಾಗಿದ್ದಾಳೆ. ಅಷ್ಟೇ ಅಲ್ಲ ನಮ್ಮ ಭಾರತೀಯ ರಕ್ಷಣಾ ಮಂತ್ರಿ ಕೂಡ ಮಹಿಳೆ. 

ಇದೆಲ್ಲವೂ ಒಂದು ಕಡೆ ಹೆಮ್ಮೆಯ ವಿಚಾರಗಳಾದರೆ, ಇನ್ನೊಂದು ಕಡೆ ಮಹಿಳೆಯರ ಮೇಲೆ ನಿರಂತರವಾಗಿ ದೌರ್ಜನ್ಯ, ದಬ್ಬಾಳಿಕೆ, ಕಿರುಕುಳ ನಡೆಯುತ್ತಲೇ ಇವೆ. ಇವೆಲ್ಲವುಗಳಿಗೆ ಕೊನೆ ಹಾಡಬೇಕು ಎಂದಾದರೆ ಅದಕ್ಕೆಲ್ಲ ಒಂದೇ ದಾರಿ,  ಅದು ಪ್ರತಿಯೊಬ್ಬ ಮಹಿಳೆ ಸಮಾನತೆ ಹಾಗೂ ಸ್ವತಂತ್ರರಾಗಿ ನಿಂತು, ಸ್ವಾವಲಂಬಿ ಜೀವನ ನಡೆಸುವಂತ ವಾತಾವರಣ ಸೃಷ್ಟಿ ಮಾಡುವುದು. ಇಂತಹ ವಾತಾವರಣ ನಿರ್ಮಾಣವಾದರೆ ಖಂಡಿತ ಮಹಿಳೆಯರ ಮೇಲಿನ ದೌರ್ಜನ್ಯ, ದಬ್ಬಾಳಿಕೆ ನಿಲ್ಲುತ್ತವೆ. 

ಯಾವಾಗ ಪ್ರತಿಯೊಬ್ಬ ಮಹಿಳೆ ಕೂಡ ಸ್ವಾವಲಂಬಿಯಾಗಿ ಬದುಕು ಸಾಗಿಸುವ ವ್ಯವಸ್ಥೆ ನಿರ್ಮಾಣವಾಗುತ್ತದೆಯೋ, ಅಂದು ನಾವು ಆಚರಿಸುವ, ಶುಭ ಕೊರುವ ಈ ಮಹಿಳಾ ದಿನಾಚರಣೆಗೆ ಒಂದು ಅರ್ಥ ದೊರೆಯುತ್ತದೆ. ಜೊತೆಗೆ ಮಹಿಳೆಯರು ಸ್ವಾವಲಂಬಿಯಾಗಿ ಬದುಕು ನಡೆಸಿದ್ದೇ ಆದಲ್ಲಿ ಅವರ ಮೇಲಿನ ದೌರ್ಜನ್ಯಗಳೂ ಸಹ ನಿಲ್ಲುತ್ತವೆ.

ಎಲ್ಲ ಮಹಿಳೆಯರಲ್ಲೂ ಒಂದು ಮನವಿ, 

ಇದು ಈ ಸಮಾಜಿಕ ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ಮಹಿಳೆಯೂ ಬದಲಾಗ ಬೇಕಿದೆ. ಮಹಿಳೆಯ ನೋವಿಗೆ ಮಹಿಳಯರೇ ಧ್ವನಿಯಾಗಬೇಕಿದೆ. ಪ್ರತಿ ಹಂತದಲ್ಲೂ, ಪ್ರತಿ ಕ್ಷೇತ್ರದಲ್ಲೂ ಬದಲಾವಣೆಗೆ ಮಹಿಳೆಯರೂ ಸಹ ಕೈ ಜೋಡಿಸ ಬೇಕಿದೆ. 

ಸ್ತ್ರೀಯರು ಮನಸ್ಸು ಮಾಡಿದ್ದೇ ಆದಲ್ಲಿ ಜಗತ್ತಿನಲ್ಲಿ ಎನು ಬೇಕಾದರೂ ಬದಲಾಯಿಸಬಹುದು, ಎಂಥದನ್ನು ಬೇಕಾದರೂ ಸಾಧಿಸಬಹುದು. ಕುಟುಂಬ, ಸಮಾಜ, ರಾಜಕೀಯ ಯಾವುದೇ ಕ್ಷೇತ್ರವಾಗಿರಲಿ ಮಹಿಳೆಯರೂ ಸಹ ಎಚ್ಚೆತ್ತುಕೊಂಡು ಬದಲಾವಣೆಯತ್ತ ಮುಖ ಮಾಡಬೇಕು. ಲಿಂಗ ತಾರತಮ್ಯ ತೊರೆದು ಸಮಾನತೆಯ ಸಮಾಜವನ್ನು ಕಟ್ಟಲು ಪ್ರತಿಯೊಬ್ಬರೂ ಮುಂದೆ ಬರಬೇಕಿದೆ. ಹೊಸ ಬದಲಾವಣೆಯೊಂದಿಗೆ ಹೊಸ ಸಮ ಸಮಾಜದ ನಿರ್ಮಿಸೋಣ, ಸಮಾನತೆಯಿಂದ ಬಾಳೋಣ.  

ಬನ್ನಿ ನೀವೂ ಬದಲಾವಣೆಯಲ್ಲಿ ಭಾಗಿಯಾಗಿ.. 

ಇದು ಬದಲಾಯಿಸುವ ಸಮಯ… 

ಬದಲಾವಣೆಯ ಸಮಯ.. 

 

ಇಂತಿ ನಿಮ್ಮವ 

ಕೆ.ವಿ.ನವೀನ್ ಕಿರಣ್ 

ಸಮಾಜ ಸೇವಕರು ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರ 

 

 

Follow us on Social Media