Human Rights means that each individual should be treated with respect, dignity and equality

SHARE THIS!

ನಮಸ್ಕಾರ,

ಚಿಕ್ಕಬಳ್ಳಾಪುರದ ಸಮಸ್ತ ಜನತೆಗೂ ವಿಶ್ವ ಮಾನವ ಹಕ್ಕುಗಳ ದಿನಾಚರಣೆಯ ಶುಭಾಷಯಗಳು.

ಸ್ನೇಹಿತರೆ, ಮಾನವ ಹಕ್ಕುಗಳು ಅಂದಾಗೆಲ್ಲ ನೆನಪಾಗೋದು ಒಂದೇ ಒಂದು ಮಾತು

 

“ Human Rights means that each individual should be treated with respect, dignity and equality “

 

ಹೌದು ಸ್ನೇಹಿತರೆ, ಮಾನವ ಹಕ್ಕುಗಳು ಅಂದ್ರೆ ಪರಸ್ಪರ ಗೌರವ ಹಾಗೂ ಸಮಾತೆಯಿಂದ ಕಾಣುವುದು. ಹಕ್ಕಗಳುನ್ನು ಯಾರಿಂದಾನೋ ಕೇಳಿ ಪಡೆಯೋದಲ್ಲ. ಬದಲಿಗೆ ನಾವೇ ಅರಿತು ಅನುಸರಿಸೋದು. ಒಬ್ಬ ವ್ಯಕ್ತಿ ಸ್ವತಂತ್ರ ಹಾಗೂ ಸಮಾನತೆಯಿಂದ ಬದುಕಲು ಮೂಲಭೂತ ಹಕ್ಕುಗಳು ಎಷ್ಟು ಪ್ರಮುಖವೋ, ಹಾಗೇಯೇ ಸಮಾಜದಲ್ಲಿನ ಇತರರೂ ಸ್ವತಂತ್ರ ಹಾಗೂ ಸಮಾನತೆಯಿಂದ ಬದುಕಲು ನಾವು ಪಾಲಿಸಬೇಕಾದ ಮೂಲಭೂತ ಕರ್ತವ್ಯಗಳೂ ಅಷ್ಟೆ ಮುಖ್ಯ.

ನೀನು ನಿನ್ನ ಇಷ್ಟದ ಧರ್ಮವನ್ನು ಅನುಸರಿಸಬಹದು, ನೀನು ಇಷ್ಟ ಬಂದ ಸಂಸ್ಕøತಿಯನ್ನು ಆಚರಿಸಬಹುದು, ನೀನು ಶಿಕ್ಷಣ ಪಡೆಯಬಹುದು ಇವು ನಿನ್ನ ಮೂಲಭೂತ ಹಕ್ಕುಗಳಾದರೆ. ನೆರೆ ಮನೆಯವನು ಅನುಸರಿಸುವ ಧರ್ಮವನ್ನು ನೀನು ಗೌರವಿಸು, ಬೇರೆ ಜಾತಿಯವರು ಆಚರಿಸುವ ಸಂಸ್ಕøತಿಯನ್ನು ಸಂಭ್ರಮಿಸು, ನಿನ್ನ ಸನೇಹಿತನೂ ಶಿಕ್ಷಣ ಪಡೆಯವಂತಾಗಲು ನೆರವಾಗು ಇವೇ ನಾವು ಅನುಸರಿಸ ಬೇಕಾದ ಮೂಲಭೂತ ಕರ್ತವ್ಯಗಳು.

ಈ ಮೂಲಭೂತ ಹಕ್ಕು ಮತ್ತು ಕರ್ತವ್ಯಗಳು ಒಂದೇ ನಾಣ್ಯದ ಎರಡು ಮುಖಗಳು. ನಾವು ಎರಡನ್ನೂ ಸ್ವಗತಿಸ ಬೇಕು. ಆಗ ಮಾತ್ರ ಸಮಾಜದಲ್ಲಿ ಸಮಾನತೆ, ಸ್ವಾತಂತ್ರ್ಯ ನೆಲೆಸುತ್ತದೆ. ಶೋಷಿತರೂ ಮೇಲೆ ಬರಲು ಅವಕಾಶ ಸಿಗುತ್ತದೆ.

ಸಮಾಜದಲ್ಲಿ ಬದಲಾವಣೆ ತರಲು ಸಂವಿಧಾನ ನೀಡಿರುವ ಕೆಲವು ಮೂಲಭೂತ ಹಕ್ಕುಗಳು ಹಾಗೂ ಕರ್ತವ್ಯಗಳನ್ನು ಪ್ರಾಮಾಣಿಕವಾಗಿ ಯೋಚಿಸಿ ಅನುಸರಿಸಬೇಕು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮೂಲಭೂತಹಕ್ಕುಗಳ ಉಲ್ಲಂಘನೆ ಆಗದಂತೆ ಕಾಪಾಡುವುದು ಎಲ್ಲರ ಜವಬ್ದಾರಿ. ಜೊತೆಗೆ ಸಂವಿಧಾನ ನೀಡಿರುವ ಅತ್ಯಂತ ಶ್ರೇಷ್ಠವಾದ ಮತದಾನದ ಹಕ್ಕನ್ನು ಅಷ್ಟೇ ಪ್ರಾಮಾಣಿಕವಾಗಿ, ಯೋಚಿಸಿ ಮಾಡಬೇಕಾಗಿರುವುದು ನಮ್ಮೇಲ್ಲರ ಕರ್ತವ್ಯ.

ಒಳ್ಳೇಯ ಸರಕಾರವನ್ನು ಹಾಗೂ ಉತ್ತಮ ಜನಪ್ರತಿನಿಧಿಯನ್ನು ಆಯ್ಕೆ ಮಾಡುವ ಮಹತ್ವದ ಜವಬ್ದಾರಿಯುತ ಹಕ್ಕು ನಮಗಿದೆ. ಅದು ಕರ್ತವ್ಯ ಕೂಡಾ ಹೌದು. ಅನೇಕ ಬದಾಲಾವಣೆಗೆ ಮತದಾನದ ಹಕ್ಕು ಸಹಾಯ ಮಾಡುತ್ತದೆ. ಪ್ರತಿಯೊಂದು ಬದಲಾವಣೆ ನಮ್ಮ ಕೈಯಲ್ಲೇ ಇದೆ.

ಈ ವಿಶ್ವ ಮಾನವ ಹಕ್ಕುಗಳ ದಿನದಂದು ಚಿಕ್ಕಬಳ್ಳಾಪುರದ ಜನತೆಯಲ್ಲಿ ನನ್ನದೊಂದು ಮನವಿ. ಪ್ರತಿಯೊಬ್ಬರೂ ಮತದಾನದ ಹಕ್ಕನ್ನು ತಪ್ಪದೇ ಚಲಾಯಿಸಿ. ಇದು ಸಂವಿಧಾನ ಕೊಟ್ಟ ಅತ್ಯಂತ ಪವಿತ್ರ ಹಾಗೂ ಪ್ರಮುಖ ಹಕ್ಕು. ಉತ್ತಮ ನಾಯಕನನ್ನು ಆಯ್ಕೆ ಮಾಡುವುದು ನಿಮ್ಮ ಕರ್ತವ್ಯ.

ಆತ್ಮೀಯರೆ, ಬದಲಾವಣೆ ಅನ್ನೋದು ಜಗದ ನಿಯಮ, ಬದಲಾಯಿಸುವ ಅವಕಾಶಗಳು ಆಗಾಗ ಬರುತ್ತಲೇ ಇರುತ್ತವೆ. ಈ ಬಾರಿ ಚಿಕ್ಕಬಳ್ಳಾಪುರದಲ್ಲಿ ಹೊಸ ಬದಲಾವಣೆಗೆ ಮುನ್ನುಡಿ ಬರೆಯುವ ಸಮಯ ಬಂದಿದೆ. ಬನ್ನಿ ಒಂದಾಗಿ ಹೊಸದೊಂದು ಬದಲಾವಣೆ ತರೋಣ. ಇದು ಬದಲಾವಣೆಯ ಸಮಯ.

 

ಶ್ರೀ ಕೆ.ವಿ ನವೀನ್ ಕಿರಣ್

ಯುವ ನಾಯಕರು ಹಾಗೂ ಸಮಾಜ ಸೇವಕರು ,

ಚಿಕ್ಕಬಳ್ಳಾಪುರ.

Follow us on Social Media