KVNK Birthday

SHARE THIS!

ಕಿವಿ ಗುಯ್ಯೀಂ ಗುಟ್ಟುವಂತ ಜೈಕಾರ, ಮುಗಿಲು ಮುಟ್ಟುವ ಅಭಿಮಾನಿಗಳ ಕರಾಡತನ , ಕಣ್ಣು ಹಾಯಿಸಿದಷ್ಟು ಅಭಿಮಾನಿಗಳ ದಂಡು. ಮಧ್ಯ ಮಧ್ಯದಲ್ಲಿ ಹರಿಸಿ ಹಾರೈಸೋ ಹಿರಿಯ ಜೀವಗಳು, ಆರತಿ ಬೆಳಗಿ ಬದುಕು ಬೆಳಕಾಗಲಿ ಅಂತ ಹಾರೈಸೋ ಗೃಹಣ ಯರು. ಯವುದೋ ಒಬ್ಬ ಸಿನೆಮಾ ನಟನೋ ಇಲ್ಲ ಮಂತ್ರಿಯೊಬ್ಬನ ಹುಟ್ಟುಹಬ್ಬವೋ ಇರಬೇಕು ದಕ್ಕೆ ಇಷ್ಟೊಂದು ಜನಸಾಗರ. ಇಷ್ಟೊಂದು ಅಭಿಮಾನಿಗಳ ಅಭಿಮನದ ಹರ್ಷೋಧ್ಗಾರ. ಅಬ್ಭಾ..! ಎನಿ ಅಭಿಮಾನ..? ಯಾರು ವ್ಯಕಿ? ನಾಯಕ ನಟನೋ.? ರಾಜಕೀಯ ನಾಯಕನೋ.? ಅಥವಾ ಬೃಹತ್ ಉಧ್ಯಮಿಯೋ.? ಛೇ ಅದ್ಯಾವೂದು ಅಲ್ಲ. ಮತ್ತೆ .!?
ಅವನು ಇಡೀ ಚಿಕ್ಕಬಳ್ಳಾಪುರದ ಮಗ. ಯುವಕರಿಗೆ ಅಣ್ಣ, ಕಲಿಯುವ ಹಂಬಲದ ಮಕ್ಕಳಿಗೆ ವಿಧ್ಯಾದಾತ. ಬಡವರ ಪಾಲಿನ ಭಾಗ್ಯಧಾತ, ಒಟ್ಟಿನಲ್ಲಿ ಚಿಕ್ಕಬಳ್ಳಾಪುರದ ಜನತೆಯ ಪಾಲಿನ ಆಶಾಕಿರಣ ಅವರೇ ಶ್ರೀ ಕೆ.ವಿ. ನವೀನ್ ಕಿರಣ್.

ಯಾರು ಈ ಕೆ. ವಿ. ನವೀನ್ ಕಿರಣ್ ಅಂತೀರಾ.. ಚಿಕ್ಕಬಳ್ಳಾಪುರ ಜ್ಞಾನ ದಾಸೋಹಿ, ರಾಜಕೀಯ ಭಿಷ್ಮ್ ಎಂದೇ ಹೆಸರುವಾಸಿಯಗಿದ್ದ ದಿವಂಗತರಾದ ಶ್ರೀ. ಸಿವಿವಿ ಅವರು ಅಂದ್ರೆ ಕರ್ನಕಂಟಿ ವೆಂಕಟೆತೆಪ್ಪ ವೆಂಕಟರಾಯಪ್ಪ. 28 ವರ್ಷಗಳ ಕಾಲ ಚಿಕ್ಕಬಳ್ಳಾಪುರ ನಗರ ಸಭೆ ಸದಸ್ಯರಾಗಿ, 3 ಬಾರಿ ಶಾಸಕರಾಗಿ ಈ ಭಾಗದ ಜನರ ಜೀವ ನಾಡಿಯಾದವರು ದಿ. ಸಿವಿವಿ ಅವರು. ಆ ಕರ್ನಕಂಟಿ ವಶಂದ ಕುಡಿಯೇ ಈ ಕೆ.ವಿ. ನವೀನ್ ಕಿರಣ್.
ಜ್ಞಾನದಾಸೋಹಿ, ಬಡವರ ಬಂಧು ಅಜ್ಜ ಸಿವಿವಿ ಅವರ ಮಾರ್ಗದರ್ಶನದಲ್ಲಿ ಬೆಳೆದ ನವೀನ್ ಕಿರಣ್ ಅಜ್ಜನಂತೆ ಶಿಕ್ಷಣ ಪ್ರೇಮಿ.

ಕೊಟ್ಟಿದ್ದು ತನಗೆ , ಬಚ್ಚಿಟ್ಟಿದ್ದು ಪರರಿಗೆ . ಕೊಟ್ಟು ಕೆಟ್ಟೇ ಎನಬೇಡ
ಅನ್ನೋ ಜ್ಞಾನಿಗಳ ಮಾತಿನಲ್ಲಿ ನಂಬಿಕೆಯಿಟ್ಟಿರೋ ಶ್ರೀ ಕೆ.ವಿ ನವೀನ್ ಕಿರಣ್ ಇಲ್ಲಿಯವರೆಗೂ ಸಹಾಯ ಕೇಳಿ ಬಂದವರನ್ನು ಎಂದಿಗೂ ಬರೀಗೈಯಲ್ಲಿ ಕಳುಹಿಸಿಲ್ಲ. ಅದೇಷ್ಟೋ ಬಡ ಮಕ್ಕಳಿಗೆ ಶಾಲಾ ಕಲೇಜು ಶುಲ್ಕವನ್ನು ತೆಗೆದುಕೊಳ್ಳದೆ ತಮ್ಮ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಣ ನೀಡಿದ್ದಾರೆ. ಅಷ್ಟೇ ಅಲ್ಲ ಉನ್ನತ ಮಟ್ಟದ ಶಿಕ್ಷಣಕ್ಕೆ ಹೋಗ ಬಯಸುವ ಅದೇಷ್ಟೋ ಬಡ ವಿಧ್ಯಾರ್ಥಿಗಳಿಗೆ ಹಣಕಾಸಿನ ನೆರವು ನೀಡಿದ್ದಾರೆ. ಆ ವಿಧ್ಯಾರ್ಥಿಗಳೇ ಈ ಅಭಿಮಾನಿಗಳು. ಅವರ ಋಣ ತಿರಿಸಲು ಅವರು ಅವರ ಹುಟ್ಟು ಹಬ್ಬವನ್ನು ವಿಭಿನ್ನವಾಗಿ ಆಚರಿಸಿದರು.
ತಮ್ಮಂತೆ ಓದಲು ಆಸಕ್ತಿ ಇರುವ ಸಾವಿರಾರೂ ಬಡ ವಿಧ್ಯಾರ್ಥಿಗಳಿಗೆ ನವೀನ್ ಕಿರಣ್ ಹೆಸರಲ್ಲಿ ನೋಟ್‍ಬುಕ್ ಹಾಗೂ ಬ್ಯಾಗ್ ವಿತರಿಸಿದ್ದಾರೆ. ಅದೇಷ್ಟೋ ಬಡ ಕುಟುಂಬಗಳಿಗೆ ಆರ್ಥಿಕ ಸಹಯ ಮಾಡಿದ್ದಾರೆ. ಇದೆಕ್ಕೆಲ್ಲ ಅವರು ತಮ್ಮ ದಿನ ನಿತ್ಯದ ಆದಾಯದ ಕಾಲು ಭಾಗವನ್ನು ಮೀಸಲಿಟ್ಟಿದ್ದಾರೆ. ಇನ್ನೂ ಇಲ್ಲಿನ ಬೀದಿ ಬದಿ ವ್ಯಾಪಾರಸ್ಥರು ಸಹ ನವೀನ್ ಕಿರಣ್ ಹುಟ್ಟು ಹಬ್ಬಕ್ಕೆ ಅನ್ನ ಸಂತರ್ಪಣೆ ಮಾಡಿದ್ದಾರೆ. ಅದು ಜಾತಿ , ಧರ್ಮಗಳ ಭೇದವಿಲ್ಲದೆ. ಇಡೀ ತಾಲಲೂಕಿನ ತುಂಬ ನವೀನ್ ಕಿರಣ್ ಹುಟ್ಟುಹಬ್ಬವನ್ನು ಊರ ಹಬ್ಬದಂತೆ ಆಚರಣೆ ಮಾಡಿದ್ದಾರೆ. ಇದಕ್ಕೆಲ್ಲ ಕಾರಣ ನವೀನ್ ಕಿರಣ್ ಅನ್ನೋ ಸರಳ ಸಹಜ ವ್ಯಕ್ತಿತ್ವವೇ ಕರಣ ಅನ್ನುತ್ತಾರೆ ಅವರನ್ನು ಹತ್ತಿರದಿಂದ ಬಲ್ಲವರು.

ಒಬ್ಬ ವಿಧ್ಯಾರ್ಥಿಯಿಂದ ಹಿಡಿದು, ಆಟೋ ಚಾಲಕರು, ಹೂ ಮಾರುವವರು, ಏಳೆನೀರು ಮಾರುವಾತ, ಸಣ್ಣ ಪೆಟ್ಟಿ ಅಂಗಡಿಯವ ಹೀಗೆ ಪ್ರತಿಬ್ಬರಿಗೂ ನವೀನ್ ಕಿರಣ್ ಅಣ್ಣಾ.. ಅಣ್ಣಾ ಅಂದ್ರೆ ದೇವ್ರು, ನನ್ನ ಮಗನ ಜೀವನ ರೂಪಿಸಿಕೊಟ್ಟ ಅಂತ ಒಬ್ಬರು ಹಾರೈಸಿದ್ರೆ, ಮಗ ಮನೆ ಬಿಟ್ಟು ವೃದ್ಧಾಶ್ರಮಕ್ಕ ಹಾಕಿದ್ರ ನವೀನ್ ಕಿರಣ್ ನಮ್ಗೆ ಮಗ ಆದ ಅಂತ ಕಣ್ತುಂಬಿ ಹಾರೈಸೋ ಹಿರಿಯ ಜೀವಗಳು. ಅಣ್ಣಾ ನನ್ನ ಮದವಿಗೆ ಅವರೇ ಕಾರಣ ಅಂತ ಪ್ರೀತಿಯಿಂದ ಆರತಿ ಬೆಳೆಗೋ ಹೆಣ್ಣುಮಕ್ಕಳು. ಅಬ್ಭಾ..! ಈ ವ್ಯಕ್ತಿ ಇಷ್ಟೇಲ್ಲ ಜನರ ಪ್ರೀತಿ ಸಂಪಾದಿಸಿದ್ದಾದ್ರೂ ಹೇಗೆ ಅನ್ನೋ ಯೋಚನೆ ಬರುತ್ತೆ. ಯಾಕಂದ್ರೆ, ಅಲ್ಲಿ ಕೂಗೋ ಅಭಿಮಾನದ ಕೂಗಾಗಲಿ, ಪ್ರೀತಿಯ ಜೈಕಾರಗಳಾಗಳಿ, ಹರಿಸಿ ಹಾರೈಸಿ ಆಶಿರ್ವಧಿಸೋ ಹಿರಿಯ ಜೀವಗಳಗಲಿ ಪ್ರತಿಯೊಬ್ಬರ ಕಂಗಳಲ್ಲೂ ಧನ್ಯತಾ ಭಾವನೆ ಎದ್ದು ಕಾಣುತ್ತಿತ್ತು. ಅದರಲ್ಲಿ ನಿಷಕಲ್ಮಶ ಪ್ರೀತಿ , ಅಭಿಮನ ತುಂಬಿತ್ತು. ಹಣದಾಸೆಗೆ ಹಕೋ ಜೈಕಾರ ಅಲ್ಲಿ ಕೇಳಲಿಲ್ಲ. ನಿಜಕ್ಕೂ ಅವನೊಬ್ಬ ಆದರ್ಶ ವ್ಯಕ್ತಿ ಅಂತ ಅನಿಸಿದ್ದು ಮಾತ್ರ ಸತ್ಯ.

ಇನ್ನೂ ನೂರಾರು ವರ್ಷ ನವೀನ್ ಕಿರಣ್ ಅವರು ನಗು ನಗುತಾ ಬಾಳಲಿ, ಚಿಕ್ಕಬಳ್ಳಾಪುರದ ಹೊಸ ಆಶಾಕಿರಣವಾಗಿ ಬೆಳಗಲಿ ಅನ್ನೋದು ಎಲ್ಲರ ಹಾರೈಕೆ.

Follow us on Social Media