ಚಿಕ್ಕಬಳ್ಳಾಪುರದ ಆಶಾಕಿರಣ – ಶ್ರೀ ಕೆ.ವಿ. ನವೀನ್ ಕಿರಣ್

SHARE THIS!

 

ಚಿಕ್ಕಬಳ್ಳಾಪುರದ ಆಶಾಕಿರಣ ಶ್ರೀ ಕೆ.ವಿ. ನವೀನ್ ಕಿರಣ್

ಚಿಕ್ಕಬಳ್ಳಾಪುರ ಜಿಲ್ಲೆ ಕನ್ನಡ ನಾಡು-ನುಡಿಗೆ ಅಪಾರ ಕೊಡುಗೆ ನೀಡಿದೆ. ಬಯಲು ಸೀಮೆಯ ಈ ಗಡಿ ಜಿಲ್ಲೆಯಲ್ಲಿ ಕನ್ನಡವನ್ನು ವಿಶ್ವ ಮಟ್ಟದಲ್ಲಿ ಗುರುತಿಸುವಂತೆ ಮಾಡುವಲ್ಲಿ ಅನೇಕ ಮಹನೀಯರು ತಮ್ಮ ಇಡೀ ಜೀವನವನ್ನೇ ಸಂಪೂರ್ಣವಾಗಿ ಅರ್ಪಿಸಿದ್ದಾರೆ. ಅಂತ ಅಗ್ರಗಣ್ಯ ನಾಯಕರಲ್ಲಿ ಸಿವಿವಿ ಅಂತಾನೇ ಖ್ಯಾತಿ ಪಡೆದ ಶ್ರೀ ಕರ್ನಕಂಟಿ ವೆಂಕಟೆತೆಪ್ಪ ವೆಂಕಟರಾಯಪ್ಪ ನವರು ಆಧುನಿಕ ಚಿಕ್ಕಬಳ್ಳಾಪುರದ ನಿರ್ಮಾತೃ.
ಇವತ್ತು ಚಿಕ್ಕಬಳ್ಳಾಪುರ ಮಾದರಿ ಜಿಲ್ಲೆಯಾಗಿದೆ ಎಂದಾದರೆ ಅದಕ್ಕೆ ಸಿವಿವಿ ಅವರ ಶಿಕ್ಷಣ ಪ್ರೇಮ, ರಾಜಕೀಯ ಚಾಣಕ್ಷ ನೀತಿಯೇ ಕಾರಣ. ಚಿಕ್ಕಬಳ್ಳಾಪುರವನ್ನು ರಾಜ್ಯದಲ್ಲೇ ಒಂದು ಮಾದರಿ ಜಿಲ್ಲೆಯನ್ನಾಗಿಸುವ ಕನಸ್ಸು ಅವರದ್ದಾಗಿತ್ತು. ಅದಕ್ಕಾಗಿಯೇ ಅವರು ಅನೇಕ ಯೋಜನೆಗಳನ್ನು ರೂಪಿಸಿದ್ದುಂಟು. ಆದರೆ, ಸಿವಿವಿ ಅವರ ಕಾಲ ನಂತರ ಚಿಕ್ಕಬಳ್ಳಾಪುರದ ಸರ್ವತೋಮುಖ ಅಭಿವೃದ್ಧಿಯ ಕನಸು ಮತ್ತು ಆ ಯೋಜನೆಗಳು ನೆರವೆರಲೇ ಇಲ್ಲ. ಅವುಗಳ ಬಗ್ಗೆ ಯೋಚಿಸಿ ಅವರ ಹಾದಿಯಲ್ಲಿ ನಡೆಯುವ ಮನಸು ಯಾವ ನಾಯಕನಿಗೂ ಬರಲೇ ಇಲ್ಲ. ಎಲ್ಲ ಸಮುದಾಯಗಳ ಸಮಾನ ಏಳಿಗೆಯನ್ನು ಬಯಸುವ ಉತ್ತಮ ನಾಯಕನ ಕೊರತೆ ನಮ್ಮ ಕ್ಷೇತ್ರಕ್ಕೆ ಇತ್ತು. ಆದರೆ, ಇವತ್ತು ಆ ಕೊರತೆ ಕೊನೆ ಹಾಡುವ ಸಮಯ ಬಂದಿದೆ. ಸಿವಿವಿ ಅವರ ಕನಸು ಸಾಕಾರಗೊಳಿಸುವ ಮಹತ್ವದ ಜವಬ್ದಾರಿಯನ್ನು ಹೊತ್ತು. ಅವರ ಗರಡಿಯಲ್ಲೇ ಬೆಳೆದಿರುವ ಅದೇ ಕರ್ನಕಂಟಿ ವಂಶದ ಕುಡಿ ಚಿಕ್ಕಬಳ್ಳಾಪುರದ ಸರ್ವತೋಮುಖ ಅಭಿವೃದ್ಧಿಗೆ ಮುನ್ನುಡಿ ಬರೆಯಲು ಮುಂದಾಗಿದ್ದಾರೆ. ಅವರೇ ನಮ್ಮ ಚಿಕ್ಕಬಳ್ಳಾಪುರದ ಆಶಾಕಿರಣ ಶ್ರೀ ಕೆ.ವಿ. ನವೀನ್ ಕಿರಣ್.

ಶ್ರೀ ಕೆ ವಿ ನವೀನ್ ಕಿರಣ್

ಸಿವಿವಿ ಯವರ ಮೊಮ್ಮಗ, ಸಿವಿವಿ ಯವರ ಕೊನೆಯ ಪುತ್ರಿ ಶ್ರೀಮತಿ ನಿರ್ಮಲಾಪ್ರಭು ಹಾಗೂ ಡಾ. ಸಾಯಿ ಪ್ರಭು ಅವರ ಸುಪುತ್ರನಾಗಿ, ಅಕ್ಟೋಬರ್ 6 , 1978 ರಲ್ಲಿ ಜನಸಿದ ಇವರು, ಓದಿದ್ದು ಕಾನೂನು ಪದವಿ.
ಸದಾಕಾಲ ಅಜ್ಜ ಸಿವಿವಿ ಅವರ ಜೊತೆಯಲ್ಲೇ ಬೆಳೆದು ಬಂದವರು. ಅಜ್ಜನ ಎಲ್ಲ ಗುಣಗಳನ್ನೂ ಮೈಗೂಡಿಸಿಕೊಂಡು ಬೆಳೆದ ನವೀನ್ ಕಿರಣ್ ತಮ್ಮ ಅಜ್ಜನ ಹಾಗೇಯೇ ಬಹುದೊಡ್ಡ ಕನಸುಗಾರ. ಜಾತಿ, ಧರ್ಮಗಳ ಭೇದವಿಲ್ಲದೆ ಎಲ್ಲರನ್ನೂ ಆತ್ಮೀಯತೆಯಿಂದ ಕಾಣುವುದು ಅವರ ವ್ಯಕ್ತಿತ್ವ. ಜೀವನದಲ್ಲಿ ಅನೇಕ ಆಘಾತಗಳನ್ನು ಕಂಡರೂ ಯಾವುದಕ್ಕೂ ಎದೆಗುಂದದೆ, ಹೊಸದೊಂದುನ್ನು ಸಾಧಿಸುವ ಛಲ. ತಮ್ಮ ತಾತ ಕಂಡ ಚಿಕ್ಕಬಳ್ಳಾಪುರದ ಸರ್ವತೋಮುಖ ಅಭಿವೃದ್ಧಿಯ ಕನಸು ಅವರನ್ನು ಸದಾ ಕಾಡುತ್ತಲೇ ಇದೆ. ನಮ್ಮ ಕ್ಷೇತ್ರವನ್ನು ಸರ್ವ ವಿಧದಲ್ಲೂ ಸರ್ವತೋಮುಖ ಅಭಿವೃದ್ಧಿ ಮಾಡುವ ಮಹತ್ವದ ಕನಸು ಅವರನ್ನು ನಿದ್ದೆ ಮಾಡದಂತೆ ಕಾಡುತ್ತಿದೆ. ಪ್ರತಿ ಕ್ಷಣ ಚಿಕ್ಕಬಳ್ಳಾಪುರದ ಬದಾಲಾವಣೆ, ಯುವಕರು ಸ್ವಾಲಂಬನೆಯ ಜೀವನ ನಡೆಸಬೇಕು, ಬಡ ಮಕ್ಕಳಿಗೂ ಉನ್ನತ ಶಿಕ್ಷಣ ಸಿಗುವಂತಾಗ ಬೇಕು. ರೈತರ ಹಿತ ಕಾಯಬೇಕು. ಕೂಲಿ ಕಾರ್ಮಿಕರ ಕಷ್ಟಕ್ಕೆ ಕಿವಿ ಕೊಡಬೇಕು, ಮಹಿಳೆಯರು ಸಶಕ್ತರಾಗಬೇಕು , ಜಾತಿ ಧರ್ಮ ತಾರತಮ್ಯ ನಿಲ್ಲಬೇಕು ಹೀಗೆ ಸಾವಿರಾರೂ ಕನಸುಗಳನ್ನು ಅವರದ್ದು.

ಅದಕ್ಕಾಗಿ ಅವರು ಚಿಕ್ಕಬಳ್ಳಾಪುರದ ಜನತೆಗೆ ಸದಾ ಸೇವೆ ಸಲ್ಲಿಸುತ್ತಲೇ ಬಂದಿದ್ದಾರೆ. ಪ್ರತಿಯೊಂದು ಕ್ಷೇತ್ರದಲ್ಲೂ ವಿಧ್ಯಾರ್ಥಿಗಳನ್ನು, ಯುವಕರನರ್ನು ಉನ್ನತ ಮಟ್ಟದಲ್ಲಿ ಬೆಳೆಸುತ್ತಾ ಬಂದಿದ್ದದಾರೆ. ಅದೇಷ್ಟೋ ಬಡವರ ಜೀವನಕ್ಕೆ ಆಸರೆಯಾಗಿದ್ದಾರೆ. ನಿರ್ಗತಿಕರಿಗೆ ನೆರವು ನೀಡಿದ್ದಾರೆ. ಆದರೆ, ಇದಕ್ಕೂ ಹೆಚ್ಚಿನ ಜನಸೇವೆ, ಸಮಾಜೀಕ ಸಮಾನತೆ ಸಾಧಿಸುವ ಹಂಬಲ ಅವರದ್ದು.
ಆ ಎಲ್ಲ ಕನಸುಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಅನೇಕ ವರ್ಷಗಳಿಂದ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಆದರೆ ಅದಕ್ಕಿಂತ ಹೆಚ್ಚಿನ ಸೇವೆ ಸಲ್ಲಿಸುವ ಕನಸು, ಇನ್ನೂ ಉತ್ತಮ ಬದಲಾವಣೆ ತರುವ ಹುಮ್ಮಸ್ಸು ಅವರನ್ನು ಇಂದು ಒಬ್ಬ ಜನನಾಯಕನನ್ನಾಗಿ ನಿಲ್ಲಿಸಿದೆ.
ತಾತನ ಒಡನಾಟ ಅವರಿಗೆ ರಾಜಕೀಯ ಓಳಹೊರವುಗಳ ಆಳದ ಅನುಭವ, ಅವರು ಕಂಡ ಚಿಕ್ಕಬಳ್ಳಾಪುರ ಅಭಿವೃದ್ಧಿಯ ಕನಸು, ಅವರು ಮಾಡಲು ಬಯಸಿದ್ದ ಯೋಜನೆಗಳು ಹೀಗೆ ಹತ್ತು ಅಲವಾರು ಅಭಿವೃದ್ಧಿಯ ಯೋಚನೆ ಹಾಗೂ ಯೋಜನೆಗಳನ್ನು ಹೊತ್ತು ಶ್ರೀ ಕೆ.ವಿ. ನವೀನ್ ಕಿರಣ್ ರಾಜಕೀಯ ಪ್ರವೇಶ ಮಾಡುತ್ತಿದ್ದಾರೆ.
ಬದಲಾವಣೆಯ ಕನಸು ಹೊತ್ತು ಅವರು ನಮ್ಮ ನಿಮ್ಮೇಲ್ಲರ ಮನೆ ಬಾಗಿಲಿಗೆ ಬರುವ ಮನೆಯ ಮಗನನ್ನು ಮನಸಾರೆ ಹರಿಸಿ, ಹಾರೈಸಿ, ಆಶೀರ್ವಧಿಸ ಬೇಕು. ತಮ್ಮ ಸಂಪೂರ್ಣ ಬೆಂಬಲ ಮತ್ತು ಸಹಕಾರ ನೀಡುವ ಮೂಲಕ, ಚಿಕ್ಕಬಳ್ಳಾಪುರದ ಸರ್ವತೋಮುಖ ಅಭಿವೃದ್ಧಿಗೆ ಮುನ್ನುಡಿ ಬರೆಯಲು ಮುಂದಾಗೋಣ.

ಬನ್ನಿ ಬದಲಾಯಿಸೋಣ
ಇದು ಬದಲಾಯಿಸುವ ಸಮಯ.

Follow us on Social Media