Swach Chickballapur Awareness program

SHARE THIS!

ಸ್ವಚ್ಛ ನಗರದಿಂದ ಮಾತ್ರ ಸ್ವಸ್ಥ ನಾಗರಿಕರಾಗಲು ಸಾಧ್ಯ. – ಯುವ ನಾಯಕ ಕೆ.ವಿ. ನವೀನ್ ಕಿರಣ್

ಸ್ವಚ್ಛ ನಗರದಿಂದ ಮಾತ್ರ ಸ್ವಸ್ಥ ನಾಗರಿಕರಾಗಲು ಸಾಧ್ಯ . ಸ್ವಚ್ಛ ಮನೆಯಿದ್ದರೆ ಅದು ಆ ಕುಟುಂಬದ ಸ್ವಸ್ಥವಾಗಿಡುತ್ತದೆ , ಬೀದಿ ಸ್ವಚ್ಛವಾಗಿದ್ದರೆ ಆ ಕೇರಿ ಸ್ವಸ್ಥವಾಗಿರುತ್ತದೆ. ಅದು ಅಲ್ಲಿನ ನಾಗರಿಕರ ಸ್ವಸ್ಥ ಬದುಕನ್ನು ಪ್ರತಿಬಿಂಬಿಸುತ್ತದೆ ಎಂದು ಕೆ.ವಿ ಮತ್ತು ಪಂಚಗಿರಿ ದತ್ತಿ ಸಂಸ್ಥೆಗಳ ಅಧ್ಯಕ್ಷ ಶ್ರೀ ಕೆ.ವಿ.ನವೀನ್ ಕಿರಣ್ ಹೇಳಿದರು. ಕೆ.ವಿ ಮತ್ತು ಪಂಚಗಿರಿ ದತ್ತಿ ಸಂಸ್ಥೆಗಳ ಅಧ್ಯಕ್ಷ ಶ್ರೀ ಕೆ.ವಿ.ನವೀನ್ ಕಿರಣ್ ಹೇಳಿದರು.
ಸ್ವಚ್ಛ ಭಾರತದ ಪರಿಕಲ್ಪಣೆಯಡಿಯಲ್ಲಿ ವೆಬ್‍ವಲ್ರ್ಡ್ ಮೊಬೈಲ್ ಆಪ್ ಹಾಗೂ ನಗರಸಭೆಯ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ಧ ಸ್ವಚ್ಛ ಚಿಕ್ಕಬಳ್ಳಾಪುರ ಜಾಗೃತಾ ಅಭಿಯಾನದಲ್ಲಿ ಮುಖ್ಯ ಅಥಿತಿಯಾಗಿ ಭಾಗವಹಿಸಿ ಮಾತನಾಡಿದ ಅವರು ನಗರ ಸ್ವಚ್ಛತೆಯ ಮೇಲೆ ಆ ನಗರದ ಜನಜೀವನವನ್ನು ಅಳೆಯಬಹುದು. ಇಂದು ಸ್ವಚ್ಛತೆಯೇ ಮುಖ್ಯವಾಗಿದೆ. ಮನೆ, ಬೀದಿ, ನಗರದಿಂದ ಹಿಡಿದು ರಾಜ್ಯ ರಾಷ್ಟ್ರದವರೆಗೂ ಪ್ರತಿಯೊಬ್ಬರೂ ಸ್ವಚ್ಛತೆಯ ಕಡೆ ಗಮನ ನೀಡಬೇಕು. ನಮ್ಮ ಚಿಕ್ಕಬಳ್ಳಾಪುರ ಕೂಡಾ ಸ್ವಚ್ಛ ನಗರವಾಗಿ ಹೊರಹೊಮ್ಮ ಬೇಕು. ಅದಕ್ಕಾಗಿ ಪ್ರತಿಯೊಬ್ಬ ನಾಗರಿಕರೂ ಕೈ ಜೋಡಿಸಬೇಕು ಎಂದರು. ಕಾರ್ಯಕ್ರಮದಲ್ಲಿ ನಗರಸಭೆ ಹಾಗೂ ವೆಬ್‍ವಲ್ರ್ಡ್ ಮೊಬೈಲ್ ಆಪ್‍ನ ಅಧೀಕಾರಿಗಳು ಭಾಗವಹಿದ್ದರು.

Follow us on Social Media