Inagurating Student’s Union and Pratiba Puraskara Program

SHARE THIS!

ಯಾವುದೇ ತಾರತಮ್ಯವಿಲ್ಲದೆ ಪ್ರತಿಭೆಗಳನ್ನು ಗುರುತಿಸ ಬೇಕು – ಯುವ ನಾಯಕ ಕೆ.ವಿ. ನವೀನ್ ಕಿರಣ್.
 

ಮಕ್ಕಳಲ್ಲಿನ ಪ್ರತಿಭೆಯನ್ನು ಗುರುತಿಸುವಾಗ ತಾರತಮ್ಯ ಮಾಡಬಾರದು ಅದು ಮಕ್ಕಳ ಮನಸ್ಸಿನ ಮೇಲೆ ಅಪಾರ ಪರಿಣಾಮ ಬೀರುತ್ತದೆ ಎಂದು ಯುವ ನಾಯಕ ಶ್ರೀ ಕೆ.ವಿ ನವೀನ್ ಕಿರಣ್ ಹೇಳಿದರು. ನಗರದ ಪ್ರತಿಷ್ಠಿತ ವಿಧ್ಯಾ ಸಂಸ್ಥೆಯಾದ ಪಂಚಗಿರಿ ಬೋದನಾ ಪ್ರೌಡ ಶಾಲೆಯಲ್ಲಿ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ , ಪ್ರತಿಭಾವಂತ ಮಕ್ಕಳಿಗೆ ಪುರಸ್ಕಾರ ಮಾಡಿ ಮಾತನಾಡಿದರು. ಸಮಾಝದಲ್ಲಿರುವ ಅಸಮಾನತೆ ಮಕ್ಕಳ ಮನಸಲ್ಲಿ ಮೂಡದಂತೆ ನೋಡಿಕೊಳ್ಳುವ ಗುರುತರ ಜವಬ್ದಾರಿ ಶಿಕ್ಷಕ ಹಾಗೂ ಪಾಲಕರ ಮೇಲಿದೆ. ಶಾಲೆಗಳಲ್ಲಿ ಯಾವುದೇ ತಾರತಮ್ಯ ಮಾಡದೆ ಪ್ರತಿಭೆಗಳನ್ನು ಗುರುತಿಸ ಬೇಕು. ಪ್ರತಿಯೊಬ್ಬ ವಿಧ್ಯಾರ್ಥಿಯಲ್ಲೂ ಒಂದಿಲ್ಲೊಂದು ಪ್ರತಿಭೆ ಇದ್ದೇ ಇರುತ್ತದೆ. ಅದನ್ನು ಗುರುತಿಸಿ ಮಕ್ಕಳನ್ನು ಪ್ರೋತ್ಸಾಹಿಸುವ ಮಹತ್ವದ ಜವಬ್ದಾರಿ ಶಿಕ್ಷರ ಮೇಲಿದೆ. ಆ ನಿಟ್ಟಿನಲ್ಲಿ ಪಂಚಗಿರಿ ಹಾಗೂ ಕೆ.ವಿ ದತ್ತಿ ಶಾಲೆಗಳ ಶಿಕ್ಷಕರು ಉತ್ತಮ ಕೆಲಸಗಳನ್ನು ಮಾಡಿದ್ದಾರೆ. ಅವರಿಗೂ ಅಭಿನಂದನೆಗಳು ಎಂದರು.

ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯರು ಸೇರಿದಂತೆ ಎಲ್ಲ ಶಿಕ್ಷಕ ಹಾಗೂ ಸಿಬ್ಭಂದಿ ವರ್ಗ ಭಾಗಿಯಾಗಿದ್ದರು.

Follow us on Social Media