Helping aid for Farmers in need

SHARE THIS!

ಅನ್ನದ ಋಣ ಮರೆಯದಿರೋಣ – ಯುವ ನಾಯಕ ಕೆ.ವಿ. ನವೀನ್ ಕಿರಣ್

ಚಿಕ್ಕಬಳ್ಳಾಪುರ ರೈತರ ಸಮಸ್ಯೆ ಇಂದು ನನ್ನಯದಲ್ಲ ಅದು ದಶಕಗಳಿಂದಲೂ ರೈತರನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಮಳೆ ಬರದೆ ಕಂಗಾಲಾಗುವ ರೈತ ಅತೀಯಾಗಿ ಮಳೆಯಾದರೂ ಕಂಗಾಲಾಗುತ್ತಾನೆ. ತುತ್ತು ಅನ್ನ ನೀಡುವ ರೈತ ಹಾನಿ ಅನುಭವಿಸಿದಾಗ ಅವನು ನೀಡಿದ ಅನ್ನದ ಋಣವನ್ನು ನಾವುಗಳು ಮರೆಯ ಬಾರದು ಎಂದು ಯುವ ನಾಯಕ , ಕೆ.ವಿ ಮತ್ತು ಪಂಚಗಿರಿ ದತ್ತಿ ಸಂಸ್ಥೆಗಳ ಅಧ್ಯಕ್ಷ ಶ್ರೀ ಕೆ.ವಿ.ನವೀನ್ ಕಿರಣ್ ಹೇಳಿದರು. ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿ ಇತ್ತಿಚೇಗೆ ಬಿದ್ದ ಆಣೆಕಲ್ಲು ಮಳೆಯಿಂದ ರೈತರು ಅಪಾರ ಬೆಳೆಹಾನಿ ಅನುಭವಿಸಿದ್ದು , ಕೆಲವು ರೈತರ ತೋಟಗಳಿಗೆ ಭೇಟಿನೀಡಿ ಆರ್ಥಿಕ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದರು. ರೈತರ ಕಷ್ಟಗಳನ್ನು ಆಲಿಸಿದ ನಂತರ ಮಾತನಾಡಿದ ಅವರು.
ಇಲ್ಲಿವರೆಗೂ ಯಾವುದೇ ಶಾಸಕರಾಗಲಿ, ಸರಕಾರವಾಗಲಿ ಈ ರೈತರಿಗೆ ಸಹಾಯಕ್ಕೆ ಮುಂದಾಗಿಲ್ಲ. ಹೀಗಾಗಿ ಕ್ಷೇತ್ರದ ಯುವ ನಾಯಕ, ಸಮಾಜ ಸೇವಕರಾದ ಶ್ರೀ ಕೆ.ವಿ. ನವೀನ್ ಕಿರಣ್ ಸಂಕ್ಷದಲ್ಲಿ ಇರುವ ರೈತರಿಗೆ ತಮ್ಮ ಕೈಲಾದಷ್ಟು ಆರ್ಥಿಕ ಸಹಾಯ ಮಾಡಿದರು. ಖುದ್ದು ರೈತರ ಜಮೀನುಗಳಿಗೆ ಭೇಟಿ ನೀಡಿ ಸಮಾಧನ ಹೇಳಿದ ಅವರು, ನಮ್ಮದು ಬರ ಪೀಡಿತ ಜಿಲ್ಲೆಯಾಗಿದ್ದು ಇಲ್ಲಿನ ರೈತರು ಅನೇಕ ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ಈ ಕಡೆ ಜನಪ್ರತಿನಿಧಿಯಾದವರು ಸ್ವಲ್ಪ ಗಮನ ಕೊಡಬೇಕು, ರೈತರಿಗೆ ಆದ ನಷ್ಟವನ್ನು ಭರಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು
ಆಗ ಅಲ್ಪ ಸ್ವಲ್ಪನಾದ್ರು ಅನ್ನದ ಋಣ ತಿರಿಸಿದಂತೆ ಆಗುತ್ತದೆ ಎಂದರು.

.

Follow us on Social Media