Azad Janmadinotsava

SHARE THIS!

ಅಮರ ಕ್ರಾಂತಿಕಾರಿ ಚಂದ್ರಶೇಕರ್ ಆಜದ್ –

ಯುವ ನಾಯಕ ಕೆ.ವಿ.ನವೀನ್ ಕಿರಣ್
ಚಿಕ್ಕಬಳ್ಳಾಪುರ :- ನಗರದಲ್ಲಿ ಚಂದ್ರಶೇಖರ್ ಅಜಾದ್ ಯುವಕರ ಸಂಘದ ವತಿಯಿಂದÀ ಚಂದ್ರಶೇಖರ್ ಅಜಾದ್ ಅವರ 111 ನೇ ಜನ್ಮದಿನಾಚರಣೆ ಪ್ರಯುಕ್ತ ನಗರದಲ್ಲಿ ಅನ್ನ ಸಂತರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಚಿಕ್ಕಬಳ್ಳಾಪುರದ ಯುವ ನಾಯಕ , ಕೆ.ವಿ ಮತ್ತು ಪಂಚಗಿರಿ ವಿಧ್ಯಾದತ್ತಿಗಳ ಅಧ್ಯಕ್ಷರಾದ ಶ್ರೀ. ಕೆ ವಿ ನವೀನ್ ಕಿರಣ್ ಮಾತನಾಡಿ ಚಂದ್ರಶೇಖರ್ ಅಜದ್ ಒಬ್ಬ ಅಮರ ಕ್ರಾಂತಿಕಾರಿ, ಯುವ ಜನಾಂಗಕ್ಕೆ ಸ್ಪೂರ್ತಿ. ತನ್ನ ಬಾಲ್ಯದಲ್ಲೇ ದೇಶದ ಸ್ವತಂತ್ರಕ್ಕಾಗಿ ಕುಟುಂಬವನ್ನೇ ತೊರೆದ ಕ್ರಾಂತಿಕಾರಿ. ಇವತ್ತಿನ ಯುವ ಪಿಳಿಗೆ ಅಜಾದ್, ಭಗತ್ ಸಿಂಣ್ ಮುಂತಾದವರ ಜೀವನ ಚರಿತ್ರೆ ತಿಳಿದುಕೊಳ್ಳ ಬೇಕಾಗಿದೆ. ದೇಶ ಹಾಗೂ ಸಮಾಜ ಸೇವೆಯಲ್ಲಿ ಮುಂದಾಗ ಬೇಕು ಎಂದು ಕರೆ ನೀಡಿದರು.

 

 

 

Follow us on Social Media