ಕೆವಿ, ಪಂಚಗಿರಿ ದತ್ತಿ ದಿನಾಚಣೆ ಅಂಗವಾಗಿ ಆಯೋಜನೆ ರಕ್ತದಾನ ಶಿಬಿರದಲ್ಲಿ ದಾಖಲೆ ಪ್ರಮಾಣದ ರಕ್ತ ಸಂಗ್ರಹ

SHARE THIS!

ಇಲ್ಲಿನ ಪ್ರತಿಷ್ಟಿತ ವಿದ್ಯಾ ಸಂಸ್ಥೆಯಾದ ಕೆವಿ ಮತ್ತು ಪಂಚಗಿರಿ ಶಿಕ್ಷಣ ಸಂಸ್ಥೆಯ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಬೃಹತ್ ಪ್ರಮಾಣದಲ್ಲಿ ರಕ್ತದಾನ ನೆರವೇರಿಸುವ ಮೂಲಕ ದಾಖಲೆ ಪ್ರಮಾಣದಲ್ಲಿ ರಕ್ತ ಸಂಗ್ರಗಿದೆ.

ಶುಕ್ರವಾರ ಬೆಳಗ್ಗೆ ಆರಂಭವಾದ ರಕ್ತದಾನ ಸಂಜೆವರೆಗೂ ಆಯೋಜನೆಯಾಗಿದ್ದು ಶಿಬಿರದ ಅಂತ್ಯದಲ್ಲಿ ಒಟ್ಟು 1 ಸಾವಿರದ 35 ಯೂನಿಟ್ ರಕ್ತ ಸಂಗ್ರಹವಾಯಿತು. ಜಿಪಂ ಸಿಇಒ ಜೆ.ಮಂಜುನಾಥ್, ಜಿಲ್ಲಾ ರಕ್ಷಣಾಧಿಕಾರಿ ಕಾರ್ತಿಕ್ ರೆಡ್ಡಿ, ಮಲೇರಿಯಾ ಅಧಿಕಾರಿ ಬಾಬುರೆಡ್ಡಿ, ಡಿವೈಎಸ್ಪಿ ಪ್ರಭುಶಂಕರ್ ಹಾಗೂ ದತ್ತಿ ಅಧ್ಯಕ್ಷ ಕೆ.ವಿ.ನವೀನ್ ಕಿರಣ್ ಮತ್ತಿತರರು ಹಾಜರಿದ್ದರು.

ಪ್ರತಿಷ್ಟಿತ ಶಿಕ್ಷಣ ಸಂಸ್ಥೆ

ಜಿಲ್ಲೆಯ ಪ್ರತಿಷ್ಟಿತ ಶಿಕ್ಷಣ ಸಂಸ್ಥೆಯ ಖ್ಯಾತಿಯ ಪಟ್ಟಿಯಲ್ಲಿರುವ ಕೆವಿ ಮತ್ತು ಪಂಚಗಿರಿ ಶಿಕ್ಷಣ ಸಂಸ್ಥೆ ಹಲವಾರು ವರ್ಷದಿಂದ ಜಿಲ್ಲೆಗೆ ವಿದ್ಯಾಧಾರೆ ಎರೆಯುತ್ತಿದೆ. ಸಂಸ್ಥೆಯ ಸಂಸ್ಥಾಪಕ ದಿ.ವೆಂಕಟರಾಯಪ್ಪ ನವರ ವಿದ್ಯಾದಾನದ ಆಶಯವನ್ನು ಮುಂದುವರೆಸುತ್ತಿರುವ ಶಿಕ್ಷಣ ಸಂಸ್ಥೆಯ ಪ್ರಸ್ತುತ ಅಧ್ಯಕ್ಷ ಕೆ.ವಿ.ನವೀನ್ ಕಿರಣ್ ಶಿಕ್ಷಣದೊಂದಿಗೆ ಹಲವು ಜನಪರ ಕಾರ್ಯಗಳನ್ನು ಮುಂದುವರೆಸಿದ್ದಾರೆ.
ಶಿಕ್ಷಣ ಸಂಸ್ಥೆ ಪ್ರಾರಂಭದಿಂದಲೂ ಆಚರಿಸಿಕೊಂಡು ಬಂದಿರುವ ದತ್ತಿ ದಿನಾಚರಣೆ ಹಲವು ಜನಪರ ಕಾರ್ಯಗಳಿಗೆ ಸಾಕ್ಷಿಯಾಗುವ ಮೂಲಕ, ಸಂಸ್ಥೆಯಲ್ಲಿ ಸೇವೆ ಸಲ್ಲಿಸುವ ಶಿಕ್ಷಕರು, ಸಿಬ್ಬಂದಿಗಳಿಗೆ ಹಬ್ಬದ ದಿನದಂತ ವಾತಾವರಣ ಮೂಡಿಸುತ್ತಿದೆ.

ಸಾಂಸ್ಕೃತಿಕ, ಕ್ರೀಡೆಗಳ ಸುಗ್ಗಿ

ಪ್ರತಿ ವರ್ಷ ಆಚರಿಸುವ ದತ್ತಿ ದಿನಾಚರಣೆ ಸಾಂಸ್ಕೃತಿಕ ಹಾಗೂ ಕ್ರೀಡೆಗಳಿಗೂ ಸುಗ್ಗಿಯಂತಾಗಿದ್ದು, ಶಿಕ್ಷಣ ಸಂಸ್ಥೆಯಲ್ಲಿ ಸೇವೆ ಸಲ್ಲಿಸುವ ಪ್ರತಿಯೊಬ್ಬರಿಗೂ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಯಲ್ಲಿ ಭಾಗವಹಿಸುವಂತೆ ಪ್ರೇರೆಪಿಸುತ್ತದೆ. ಇದರೊಂದಿಗೆ ಸಂಗೀತ, ನಾಟಕ, ಹಾಡುಗಾರಿಕೆ ಸ್ಪರ್ಧೆಗಳು ಮಕ್ಕಳಿಂದ ಹಿಡಿದು ಹಿರಿಯರ ವರೆಗೂ ಆಯೋಜಿಸಿ ಪ್ರೋತ್ಸಾಹಿಸಲಾಗುತ್ತಿದೆ.

ಜನಪರ ಕಾರ್ಯಗಳು

ಶಿಕ್ಷಣದೊಂದಿಗೆ ಹಲವಾರು ಜನಪರ ಕಾರ್ಯಗಳನ್ನು ನಿರಂತರವಾಗಿ ನಡೆಸಿಕೊಂಡು ಬಂದಿರುವ ಪಂಚಗಿರಿ ದತ್ತಿ, ಗ್ರಾಮಾಂತರ ಬಡ ವಿದ್ಯಾರ್ಥಿಗಳಿಗೆ ಅತ್ಯಂತ ಕಡಿಮೆ ವೆಚ್ಚದಲ್ಲಿ ಶಿಕ್ಷಣ ನೀಡುತ್ತಿದೆ. ಇದರೊಂದಿಗೆ ಕೆಲ ಸಂಘ ಸಂಸ್ಥೆಗಳ ಸದಸ್ಯರ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಮೂಲಕ ವಿದ್ಯಾದಾನದಲ್ಲಿ ಮುಂಚೂಣಿಯಲ್ಲಿರುವ ಶಿಕ್ಷಣ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಒಟ್ಟಾರೇ ಅವಿಭಜಿತ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆ ಸೇರದಂತೆ ಇತರೆ ಜಿಲ್ಲೆ ಹಾಗೂ ರಾಜ್ಯಗಳ ವಿದ್ಯಾರ್ಥಿಗಳನ್ನು ಪೋಷಿಸಿ ವಿದ್ಯಾದಾನ ನೀಡಿದ ಕೀರ್ತಿ ಕೆವಿ ಮತ್ತು ಪಂಚಗಿರಿ ಶಿಕ್ಷಣ ಸಂಸ್ಥೆಗೆ ಸೇರುತ್ತದೆ.

 

 

Follow us on Social Media